ಕಟ್ಟಡ ಕಾರ್ಮಿಕ'ರ ಮಕ್ಕಳಿಗೆ ಗುಡ್ ನ್ಯೂಸ್ :'ಉಚಿತ ಶಾಲಾ ಕಿಟ್' ವಿತರಣೆಗಾಗಿ ಅರ್ಜಿ ಆಹ್ವಾನ

ಮಡಿಕೇರಿ : 6 ನೇ ತರಗತಿಯಿಂದ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಡಿಕೇರಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಾಲಾ ಕಿಟ್ಗಳನ್ನು ಕಾರ್ಮಿಕ ಮಂಡಳಿಯ ಅರ್ಹ ನೋಂದಾಯಿತ ಕಾರ್ಮಿಕರ ಮಕ್ಕಳ ಪೈಕಿ 06 ರಿಂದ 08 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.
ಫಲಾನುಭವಿಯ ಗರಿಷ್ಠ 02 ಮಕ್ಕಳಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು. ಮೊದಲ ಹಂತದಲ್ಲಿ 01 ಮಗುವಿಗೆ ಮಾತ್ರ ಈ ಸೌಲಭ್ಯ ನೀಡಿ ಇತರೆ ಎಲ್ಲಾ ಮಕ್ಕಳಿಗೆ ಸೌಲಭ್ಯ ದೊರೆತ ನಂತರ ಶಾಲಾಕಿಟ್ಗಳು ಲಭ್ಯವಿದ್ದಲ್ಲಿ, 2 ನೇ ಮಗುವಿಗೆ ಸೌಲಭ್ಯ ಒದಗಿಸಲಾಗುವುದು. ಪತಿ ಮತ್ತು ಪತ್ನಿ ಇಬ್ಬರು ನೋಂದಾಯಿತ ಕಾರ್ಮಿಕರಾಗಿದ್ದಲ್ಲಿ ಗರಿಷ್ಠ ಎರಡು ಮಕ್ಕಳಿಗೆ ಮಾತ್ರ ಮೇಲಿನ ಕ್ರಮದಲ್ಲೇ ವಿತರಿಸಲು ಕ್ರಮವಹಿಸಲಾಗುತ್ತದೆ ಹೀಗಾಗಿ ಇಬ್ಬರಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 10 ದಿನಗಳೊಗೆ ಅರ್ಜಿಯನ್ನು ತಾಲ್ಲೂಕು ಕಾರ್ಮಿಕ ಇಲಾಖೆ ಕಚೇರಿಗೆ ಸಲ್ಲಿಸುವಂತೆ ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.