ಐದು ಸಲ ಗೆದ್ದೆ, ಅಲ್ಲೂ‌ ಇಲ್ಲ, ಇಲ್ಲೂ‌ ಮಂತ್ರಿ ಸ್ಥಾನವೂ ಕೊಡಲಿಲ್ಲ! ಎನ್ ವೈ ಜಿ ಅಸಮಧಾನ

ಐದು ಸಲ ಗೆದ್ದೆ, ಅಲ್ಲೂ‌ ಇಲ್ಲ, ಇಲ್ಲೂ‌ ಮಂತ್ರಿ ಸ್ಥಾನವೂ ಕೊಡಲಿಲ್ಲ! ಎನ್ ವೈ ಜಿ ಅಸಮಧಾನ

ಶಿರಸಿ: ಆರು ಸಲ ಗೆದ್ದೆ, ಅಲ್ಲೂ‌ ಕೊಡಲಿಲ್ಲ, ಇಲ್ಲೂ‌ ಕೊಡಲಿಲ್ಲ ಸಚಿವ ಸ್ಥಾನ. ಮನಸ್ಸು ಐಸ್ ಗಡ್ಡೆಯಾಗಿದೆ ಎಂದು ಕೂಡ್ಲಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಅಸಮಧಾನ ವ್ಯಕ್ತಪಡಿಸಿದರು.

ಅವರು ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶುಕ್ರವಾರ ರಾಜೀನಾಮೆ‌ ಸಲ್ಲಿಸಿ ಮಾತನಾಡಿದರು.

ಆರು ಬಾರಿ ಶಾಸಕರಾಗಿದ್ದೆ. ನನಗೆ ಒಮ್ಮೆ ಕೂಡ ಮಂತ್ರಿ ಸ್ಥಾನ ಕೊಡಲಿಲ್ಲ. ನನಗಿಂತ ಸಣ್ಣವರಾಗಿದ್ದವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಒಳ್ಳೆ ಪೋರ್ಟ್‌ ಪೊಲೀಯೋ ನೀಡಿದ್ದಾರೆ. ಯಾವ ಪಕ್ಷದವರು ಕೊಟ್ಟಿಲ್ಲ. ಮಾಧ್ಯಮದವರೂ ಕೇಳಿಲ್ಲ ಎಂದು ಆಕ್ಷೇಪಿಸಿದ ಅವರು, ರಾಜೀನಾಮೆ ಕೊಡುವಾಗ ಎಲ್ಲ ಕೇಳ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಯೋಮಾನದ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದೂ ಹೇಳಿದ ಅವರು, ಮುಂದಿನದ್ದು ಮುಂದಿನ ತೀರ್ಮಾನ ಎಂದರು.

ಈ ಹಿಂದೆ ಕಾಂಗ್ರೆಸ್ ನಿಂದ ಕಾಂಗ್ರೆಸ್ ನಿಂದ ನಾಲ್ಕು ಸಲ ಮೊಳಕಾಲ್ ಮೂರಲ್ಲಿ, ಒಂದು ಸಲ ಬಳ್ಳಾರಿ ಗ್ರಾಮೀಣ, 2018ರಲ್ಲಿ ಬಿಜೆಪಿಯಿಂದ ಕೂಡ್ಲಗಿ ಶಾಸಕರಾಗಿ ಕಾರ್ಯ ಮಾಡಿದ್ದೆ. ಧರಂ ಸಿಂಗ್‌ ರ ಅವಧಿಯಲ್ಲಿ ಉಪ ಸಭಾಪತಿಗಳಾಗಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಂಜುಂಡಪ್ಪ ಅನುಷ್ಟಾನ ಸಮಿತಿ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದರು. ಅದಕ್ಕೆ ಸದಾ ಕೃತಜ್ಞ ಎಂದರು.

ಈ‌ ಮಧ್ಯೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನಕುಮಾರರಿಗೂ ರಾಜೀನಾಮೆ ಕಾರಣ ಈ‌ ಮೊದಲೇ ತಿಳಿಸಿದ್ದೇನೆ ಎಂದೂ ಹೇಳಿದರು.