ಅರವಿಂದ ಕೇಜ್ರಿವಾಲ್‌ ವಿರುದ್ಧ ಭಗತ್‌ ಸಿಂಗ್‌ ಕುಟುಂಬ ಗರಂ

ಅರವಿಂದ ಕೇಜ್ರಿವಾಲ್‌ ವಿರುದ್ಧ ಭಗತ್‌ ಸಿಂಗ್‌ ಕುಟುಂಬ ಗರಂ

ವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಈಗ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಕುಟುಂಬದ ಆಕ್ರೋಶ ಎದುರಿಸುವಂತಾಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಡಿಸಿಎಂ ಮನೀಶ್‌ ಸಿಸೋಡಿಯ ಹಾಗೂ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಭಗತ್‌ ಸಿಂಗ್‌ ಜತೆಗೆ ಹೋಲಿಕೆ ಮಾಡಿದ್ದರು.

ಈ ಬಗ್ಗೆ ಮಾತನಾಡಿರುವ ಭಗತ್‌ ಸಿಂಗ್‌ ಕುಟುಂಬಸ್ಥ ಹರ್ಬಜನ್‌ ಸಿಂಗ್‌, “ಭ್ರಷ್ಟಾಚಾರ ಮಾಡಿದವರನ್ನು ಹುತಾತ್ಮರಾದವರೊಂದಿಗೆ ಹೋಲಿಸುತ್ತಿರುವುದೇಕೆ? ಈ ರೀತಿಯಲ್ಲಿ ನಿಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಬೇಕೇ? ಭಗತ್‌ ಸಿಂಗ್‌ ಮಾತ್ರವಲ್ಲ ಬೇರೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರೊಂದಿಗೂ ಈ ರೀತಿಯಲ್ಲಿ ಹೋಲಿಕೆ ಮಾಡಬೇಡಿ. ಭಗತ್‌ ರಾಜಕೀಯದಲ್ಲಿ ಗೆದ್ದು ಅಧಿಕಾರ ಪಡೆಯಬೇಕೆನ್ನುವ ಯಾವ ಆಲೋಚನೆಯನ್ನೂ ಹೊಂದಿರಲಿಲ್ಲ’ ಎಂದು ಹೇಳಿದ್ದಾರೆ.

ಮನೀಶ್‌ ಸಿಸೋಡಿಯಾ ಅವರನ್ನು ಸಿಬಿಐ ತನಿಖೆ ಮಾಡಿರುವ ಹಿನ್ನೆಲೆ ಮಾತನಾಡಿದ್ದ ಕೇಜ್ರಿವಾಲ್‌, “ಇದು 2ನೇ ಸ್ವಾತಂತ್ರ್ಯ ಸಮರ. ಇಲ್ಲಿ ಮನೀಶ್‌ ಮತ್ತು ಸತ್ಯೇಂದ್ರ ಜೈನ್‌ ಅವರು ಭಗತ್‌ ಸಿಂಗ್‌ರಂತೆ ಹೋರಾಡುತ್ತಿದ್ದಾರೆ’ ಎಂದು ಹೋಲಿಕೆ ಮಾಡಿದ್ದರು.