ಸೆ. 27 ಧಾರವಾಡ ಬಂದ್
ಕೇಂದ್ರ ಸರ್ಕಾರದ ಮೂರು ಕಾಯ್ದೆಗಳ ರದ್ಧತಿಗೆ ಒತ್ತಾಯಿಸಿ ಸೆ. 27 ರಂದು ನಡೆಯುವ ಭಾರತ ಬಂದ್‍ಗೆ ಧಾರವಾಡದಲ್ಲಿಯೂ ಬಂದ್‍ಗೆ ಕರೆ ನೀಡುವ ಮೂಲಕ ಬೆಂಬಲ ನೀಡಲಾಗುತ್ತಿದೆ. ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಬೆಂಬಲ ನೀಡುತ್ತಿದ್ದು, ಬೆಳಿಗ್ಗೆ 6 ರಿಂದ ಸಂಜೆಯವರೆಗೆ ಧಾರವಾಡ ಬಂದ್ ಆಗಲಿದೆ. ಇನ್ನು ಸಿ.ಎಫ್.ಡಿ.ಐ, ರೈತ ಸೇನಾ ಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಆರ್.ಕೆ.ಎಸ್, ಸಿಟಿಜನ್ ಫಾರ್ ಡೆಮಾಕ್ರಸಿ, ಲೀಡ್ಕರ್ ಸಂಘ, ಡಿ.ಎಸ್.ಎಸ್ ಸೇರಿದಂತೆ ಹಲವು ಸಂಘಟನೆ ಬಂದ್ ಗೆ ಬೆಂಬಲ ನೀಡುತ್ತಿವೆ.