ದೊಡ್ಮನೆ ಹುಡುಗನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಗ್ನಿಹೊತ್ರಿ ಕುಟುಂಬ

ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಯುವ ನಟ ಪುನೀತ್ ರಾಜ್ ಕುಮಾರ್ ಹೃದಯ ಆಘಾತದಿಂದ ವಿಧಿವಶರಾಗಿದ್ದು. ಇಡೀ ನಾಡಿನ ಜನತೆ ಶೋಕದಲ್ಲಿ ಮುಳಗಿದ್ದಾರೆ. ಅಪ್ಪು ಇನ್ನು ಅಭಿಮಾನಿಗಳ ಪಾಲಿಗೆ ನೆನಪು ಮಾತ್ರ. ಪುನೀತ್ ನಿಧನದ ಬೆನ್ನಲ್ಲೇ ಧಾರವಾಡದ ಸೈದಾಪೂರ ನಗರದ ಅಗ್ನಿಹೊತ್ರಿ ಕುಟುಂಬಸ್ಥರ ನೇತ್ರತ್ವದಲ್ಲಿ ಪವರ್ ಸ್ಟಾರ್ ಕಟೌಟ್ ಗೆ ಮಾಲಾರ್ಪಣೆ ಮಾಡುವ ಮೂಲಕ ಬೇನಬತ್ತಿ ಹಚ್ಚಿ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ರು. ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗಣ್ಯತೆ ಗಣ್ಯರು ಭಾಗಿಯಾಗಿ ಪುನೀತ್ ಅವರ ಒಡನಾಟ, ಬೆಳೆದ ವಾತಾವರಣದ ಬಗ್ಗೆ ಮೆಲುಕು ಹಾಕಿದ್ರು. ಇಂತಹ ಬೆಟ್ಟದ ಹೂ ಕಳೆದುಕೊಂಡ ರಾಜ್ ಕುಟುಂಬದ ನೋವು ನಿವಾರಿಸುವ ಶಕ್ತಿ ಆ ದೇವರು ಕರುಣೆಸಲಿ ಎಂದು ಅಗ್ನಿಹೊತ್ರಿ ಕುಟುಂಬಸ್ಥರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.