ಇದು ಕನ್ನಡ ಬಿಗ್‌ ಬಾಸ್‌ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿ

ಇದು ಕನ್ನಡ ಬಿಗ್‌ ಬಾಸ್‌ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿ

ಮೊದಲ ದಿನದಿಂದಲೂ ಎಲ್ಲರನ್ನೂ ರಂಜಿಸಿದ್ದ ಅರುಣ್‌ ಸಾಗರ್‌ ಇದ್ದಕ್ಕಿದ್ದಂತೆ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದಿದ್ದಾರೆ. ಅವರ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವನ್ನು ಬಿಗ್‌ ಬಾಸ್‌ ಅರುಣ್‌ ಸಾಗರ್‌ ಅವರಿಗೆ ತಿಳಿಸಿದ್ದು, ಅವರು ದೊಡ್ಮನೆಯಿಂದ ಹೊರ ನಡೆದಿದ್ದಾರೆ. ಮೂಲಗಳ ಪ್ರಕಾರ ಅರುಣ್‌ ಸಾಗರ್‌ ಪುತ್ರಿ, ತಲೆ ಸುತ್ತಿ ಬಿದ್ದಿದರಿಂದಾಗಿ ದವಡೆ ಭಾಗಕ್ಕೆ ಪೆಟ್ಟಾಗಿತ್ತು, ಈ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದರು ಎನ್ನಲಾಗಿದೆ.