ಭಾರತೀಯ ರೈಲ್ವೆ ಜೊತೆ ಕೊಂಕಣ ರೈಲ್ವೆ ವಿಲೀನ; ಸಚಿವರಿಗೆ ಮನವಿ

ಭಾರತೀಯ ರೈಲ್ವೆ ಜೊತೆ ಕೊಂಕಣ ರೈಲ್ವೆ ವಿಲೀನ; ಸಚಿವರಿಗೆ ಮನವಿ

ಕುಂದಾಪುರ: ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜೊತೆಗೆ ವಿಲೀನಗೊಳಿಸುವ ಪ್ರಕ್ರಿಯೆ ಸಂಬಂಧ ರಾಜ್ಯಗಳ ವರದಿ ಕೇಳಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌‌ ಹೇಳಿದ್ದಾರೆ. ಅಜಿತ್‌ ಶೆಟ್ಟಿ ಕಿರಾಡಿ ನೇತೃತ್ವದ ನಿಯೋಗವು ನೀಡಿದ ಮನವಿಯನ್ನು ಸಚಿವರು ಸ್ವೀಕರಿಸಿದರು. ಬಾರ್ಕೂರಿನಲ್ಲಿ ನಿಲುಗಡೆ ಹೊಂದಿದ್ದ ಮುಂಬೈ-ಮಂಗಳೂರು ಮತ್ಸ್ಯಗಂಧ ಎಕ್ಸ್‌‌ಪ್ರೆಸ್‌ ರೈಲಿಗೆ ಮತ್ತೆ ನಿಲುಗಡೆ ಕಲ್ಪಿಸುವಂತೆ ಮನವಿ ಮಾಡಲಾಯಿತು. ಈ ವೇಳೆ ಸಚಿವರು ಶೀಘ್ರವೇ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.