ಮತ್ತೆ ಗಡಿ ವಿವಾದ ಕೆದಕಿದ ಮಹಾರಾಷ್ಟ್ರ

ಮತ್ತೆ ಗಡಿ ವಿವಾದ ಕೆದಕಿದ ಮಹಾರಾಷ್ಟ್ರ

ಬೆಳಗಾವಿ: ಕರ್ನಾಟಕದ ವಿರುದ್ದ ಪದೇ ಪದೇ ಗಡಿ ವಿವಾದ ಕೆದಕುವ ಮಹಾರಾಷ್ಟ್ರ, ನಾಗ್ಪುರದಲ್ಲಿ ಆರಂಭವಾದ ಅಲ್ಲಿನ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ವಿರುದ್ದ ನಿರ್ಣಯ ಮಾಡಿದೆ. ಅಜಿತ್‌ ಪವಾರ್‌‌‌ ಗಡಿ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವ ಅಮಿತ್‌ ಶಾ ಸಭೆಯಲ್ಲಿ ಕರ್ನಾಟಕಕ್ಕೆ ತೆರಳುವ ಮಹಾರಾಷ್ಟ್ರ ಸಚಿವರನ್ನು ತಡೆಯುವುದಿಲ್ಲವೆಂಬ ಮಾತನ್ನು ಬಸವರಾಜ ಬೊಮ್ಮಾಯಿ ಕೊಟ್ಟಿದ್ದರು. ಆದರೆ, ಈಗ ಮಾತಿಗೆ ತಪ್ಪಿದ್ದಾರೆ ಎಂದು ಅದನ್ನು ಖಂಡಿಸುವ ನಿರ್ಣಯ ಮಾಡಿದ್ದಾರೆ.