ಶಿವಮೊಗ್ಗದಿಂದ ಗಂಧದ ಮರ ಕಡಿಯಲು ಬೆಂಗಳೂರಿಗೆ ಬಂದ ಖದೀಮರು..!

ಬೆಂಗಳೂರು: ನಂದಿನಿ ಲೇಔಟ್ನ ಆರ್ಎಂಸಿ ಯಾರ್ಡ್ನಲ್ಲಿ ಶ್ರೀಗಂಧ ಮರ ಕಡಿದು ಕದ್ದೊಯ್ಯುತ್ತಿದ್ದ ತಂಡವನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದಿಂದ ಬಂದು ಗಂಧದ ಮರ ಕಳವು ಮಾಡುತ್ತಿದ್ದರು.
ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಕಾರು ಪೀಣ್ಯ ಟೋಲ್ ದಾರಿಯಾಗಿ ಹಾದು ಹೋಗುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಕಾರಿನ ನಂ. ಲಭ್ಯವಾಗಿದ್ದು, ಮರ ಕದ್ದೊಯ್ಯುತ್ತಿದ್ದ ತಂಡವನ್ನು ಬಂಧಿಸಲು ಪೊಲೀಸರಿಗೆ ಸಹಕಾರಿಯಾಗಿದೆ. ಪೊಲೀಸರು ಬಂಧಿತರಿಂದ 150 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.