ರಾಜಕೀಯ ಹಿತಾಸಕ್ತಿಯಿಂದ ಮತಾಂತರ ನಿಷೇಧ ವಿಧೇಯಕ : ಯು.ಟಿ.ಖಾದರ್
ಬೆಳಗಾವಿ,ಡಿ.23-ರಾಜಕೀಯ ಹಿತಾಸಕ್ತಿಯಿಂದ ಮತಾಂತರ ನಿಷೇಧ ವಿಧೇಯಕವನ್ನು ತರಲಾಗುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಜನರ ಹಿತಾಸಕ್ತಿ ಬೇಕಾಗಿಲ್ಲ.
ಕಾನೂನು ಆಯೋಗ ಮಸೂದೆಯ ಕರಡನ್ನು ಕಳುಹಿಸಿದ್ದು ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ. ಸಂಪುಟ ಸಭೆಗೆ ತನ್ನಿ ಎಂದು ಸಹಿ ಹಾಕಿದ್ದೇ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದು ದೊಡ್ಡ ತಪ್ಪು ಎಂದು ಬಿಂಬಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ. ಐದು ವರ್ಷಗಳ ಕಾಲ ಆಡಳಿತ ನಡೆಸಬೇಕು. ಅಲ್ಲಿಯವರೆಗೆ ಅಕಾರವಿದೆ. ಆದರೆ ಪದೇ ಪದೇ ಮುಖ್ಯಮಂತ್ರಿ ಬದಲಾದರೆ ಆಡಳಿತದಲ್ಲಿ ಹಿಡಿತವಿರುವುದಿಲ್ಲ. ಈ ರೀತಿಯ ಹೇಳಿಕೆ ನೀಡುವುದರಿಂದ ಅಕಾರಿಗಳ ಮೇಲೆ ಹಿಡಿತ ಸಾಸಲು ಆಗುವುದಿಲ್ಲ ಎಂದು ಹೇಳಿದರು.