ಬೆಳಗಾವಿ ಪಾಲಿಕೆ ಚುನಾವಣೆ ವೇಳೆ ಮನೆಗಳ ಮುಂದೆ ಭಗವಾಧ್ವಜ ನೆಟ್ಟು ಎಂಇಎಸ್ ಪುಂಡರು ಕಿರಿಕ್ | Belgaum |

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಎಂಇಎಸ್ ಪುಂಡರು ಉದ್ಧಟತನ ಮೆರೆಯುತ್ತಿದ್ದಾರೆ. ಮಹಾರಾಷ್ಟ್ರ ಏಕೀರಣ ಸಮಿತಿ (ಎಂಇಎಸ್) ಸದಸ್ಯರು ಪ್ರತಿಯೊಂದು ಮನೆ ಮುಂದೆ ಭಗವಾಧ್ವಜ ಏರಿಸಿ ಮತದಾನಕ್ಕೆ ತೆರಳಿದ್ದಾರೆ. ಬೆಳಗಾವಿಯ ಶಹಾಪುರದ ಕೊರೆಗಲ್ಲಿಯ ಮನೆಗಳ ಮುಂದೆ ಎಂಇಎಸ್ ಪುಂಡರು ಭಗವಾಧ್ವಜ ನೆಟ್ಟು, ವೋಟಿಂಗ್ ಮಾಡಲು ತೆರಳಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಕಿಡಿಗೇಡಿಗಳು ಕಿರಿಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.