ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 25 ವರ್ಷಗಳ ನಂತರ ಬಿಜೆಪಿಗೆ ಬಹುಮತ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 25 ವರ್ಷಗಳ ನಂತರ ಬಿಜೆಪಿಗೆ ಬಹುಮತ

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. 58 ವಾರ್ಡಗಳನ್ನು ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 25 ವರ್ಷಗಳ ನಂತರ ಭಾರತೀಯ ಜನತಾ ಪಾರ್ಟಿ ಮೊದಲ ಸಲ ಅಧಿಕಾರ ಗದ್ದುಗೆ ಹಿಡದಿದೆ.

ಗಡಿ ಹಾಗೂ ಭಾಷಾ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೆ ಮತದಾರರು ಕೈ ಕೊಟ್ಟ ಪರಿಣಾಮವಾಗಿ ಈ ಬಾರಿ ಸಮಿತಿ ಮುಖಂಡರಿಗೆ ತೀವ್ರ ಮುಖ ಭಂಗವಾಗಿದೆ. ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಅಧಿಕಾರದ ಕನಸು ಕಂಡ ಕಾಂಗ್ರೆಸ್ ಗೆ ನಿರಾಸೆಯಾಗಿದೆ‌.

ಚುನಾವಣೆಯಲ್ಲಿ ಮಕಾಡೆ ಮಲಗಿರುವ ಎಂಇಎಸ್ ನೂತನ ನಗರ ಸೇವಕನ ಬೆಂಬಲಿಗರಿಂದ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಬಾಲ್ಕಿ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರ ಝಾಲಾಯಿಚ್ ಪಾಯಿಜೆ ಎಂಬ ಉದ್ದಟತನದ ಘೋಷಣೆ ಕೂಗುವ ಮೂಲಕ ತಮ್ಮ ಉದ್ದಟತನ ತೋರಿಸಿದ್ದಾರೆ.