Duniya Vijay: ತೆಲುಗು ಸ್ಟಾರ್ ನಟನಿಗೆ ದುನಿಯಾ ವಿಜಯ್ ವಿಲನ್? ಟಾಲಿವುಡ್ ಅಂಗಳದಿಂದ ಕೇಳಿಬಂತು ಬಿಗ್ ನ್ಯೂಸ್

ನಟ ದುನಿಯಾ ವಿಜಯ್ ಅವರು ಆರಂಭದ ದಿನಗಳಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 'ದುನಿಯಾ' ಸಿನಿಮಾದಿಂದ ಹೀರೋ ಆದ ಬಳಿಕ ಅವರು ಮತ್ತೆಂದೂ ಹಿಂದಿರುಗಿ ನೋಡಿಲ್ಲ.
ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಆಯಕ್ಷನ್-ಕಟ್ ಹೇಳಲಿದ್ದಾರೆ. ಇದು ನಂದಮೂರಿ ಬಾಲಕೃಷ್ಣ ನಟಿಸಲಿರುವ 107ನೇ ಸಿನಿಮಾವಾಗಿದ್ದು, ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ರಾಯಲಸೀಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕರು ಈ ಚಿತ್ರ ಮಾಡುತ್ತಿದ್ದಾರೆ. ಸದ್ಯ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಮೂಲಗಳ ಪ್ರಕಾರ ದುನಿಯಾ ವಿಜಯ್ ಅವರಿಗೆ ವಿಲನ್ ಪಾತ್ರಕ್ಕಾಗಿ ಬುಲಾವ್ ಬಂದಿದೆ.
ಪ್ರತಿಷ್ಠಿತ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ದುನಿಯಾ ವಿಜಯ್ ಆಯ್ಕೆ ಆಗಿರುವ ಬಗ್ಗೆ ನಿರ್ಮಾಪಕರೇ ಅಧಿಕೃತವಾಗಿ ಅನೌನ್ಸ್ ಮಾಡಬೇಕಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಸುದ್ದಿ ಕೇಳಿ ದುನಿಯಾ ವಿಜಯ್ ಫ್ಯಾನ್ಸ್ ಎಗ್ಸೈಟ್ ಆಗುವುದು ಗ್ಯಾರಂಟಿ. ಖ್ಯಾತ ಕಲಾವಿದರ ಬೇರೆ ಭಾಷೆಯ ಚಿತ್ರರಂಗದಲ್ಲಿ ವಿಲನ್ ರೋಲ್ ಮಾಡುವ ಟ್ರೆಂಡ್ ಜೋರಾಗಿದೆ. ಡಾಲಿ ಧನಂಜಯ ಅವರು ತೆಲುಗಿನ 'ಪುಷ್ಪ' ಚಿತ್ರದಲ್ಲಿ ಖಳನಾಗಿ ಕಾಣಿಸಿಕೊಳ್ಳಲಿರುವುದರಿಂದ ಆ ಸಿನಿಮಾದ ಮೇಲಿನ ಹೈಪ್ ಹೆಚ್ಚಲು ಕಾರಣ ಆಗಿದೆ.
'ಸಲಗ' ಸಿನಿಮಾದಿಂದ ದುನಿಯಾ ವಿಜಯ್ ಅವರಿಗೆ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಗಿದೆ ಎಂದರೂ ತಪ್ಪಿಲ್ಲ. ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಅವರು ಭಾರಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡು ಧೂಳೆಬ್ಬಿಸಿದೆ. ಈಗ ವಿಜಯ್ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಹೀರೋ ಆಗಿ ಅವರು ಒಪ್ಪಿಕೊಳ್ಳಲಿರುವ ಹೊಸ ಸಿನಿಮಾ ಯಾವುದು? ನಿರ್ದೇಶಕನಾಗಿ ಅವರ ಮುಂದಿನ ಪ್ರಾಜೆಕ್ಟ್ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಅದರ ನಡುವೆಯೇ ಅವರು ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ವಿಲನ್ ಆಗುತ್ತಾರೆ ಎಂಬ ಸುದ್ದಿ ಕೇಳಿಬಂದಿದ್ದು, ಅಧಿಕೃತ ಘೋಷಣೆಗಾಗಿ ನಿರೀಕ್ಷಿಸಲಾಗುತ್ತಿದೆ.
'ಶಿವಣ್ಣ ಮತ್ತು ಅವರ ಕುಟುಂಬಕ್ಕೆ ನಾನು ಚಿರಋಣಿ'; ಸಲಗ ಗೆಲುವಿನಲ್ಲಿ ದುನಿಯಾ ವಿಜಯ್ ಧನ್ಯವಾದ
'ಸಲಗ ಚಿತ್ರವನ್ನು ತುಳಿಯೋಕೆ ಆಗಲ್ಲ, ಸುಮ್ಮನೆ ಸಣ್ಣತನ ತೋರಿಸಬೇಡಿ': ದುನಿಯಾ ವಿಜಯ್ ಎಚ್ಚರಿಕೆ