ನ್ಯೂಜಿಲೆಂಡಿನ ಆಕ್ಲೆಂಡ್ ನಲ್ಲಿ ಪ್ರವಾಹ ; ದಾಖಲೆ ಮಳೆಗೆ ಮೂವರು ಬಲಿ, ಓರ್ವ ನಾಪತ್ತೆ

ನ್ಯೂಜಿಲೆಂಡಿನ ಆಕ್ಲೆಂಡ್ ನಲ್ಲಿ ಪ್ರವಾಹ ; ದಾಖಲೆ ಮಳೆಗೆ ಮೂವರು ಬಲಿ, ಓರ್ವ ನಾಪತ್ತೆ

ನ್ಯೂಜಿಲೆಂಡ್‌ : ಅತಿದೊಡ್ಡ ಆಕ್ಲೆಂಡ್‌ ನಗರದಲ್ಲಿ ದಾಖಲೆ ಮಟ್ಟದ ಮಳೆ ಸುರಿದ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಆಕ್ಲೆಂಡ್ ಪ್ರದೇಶಕ್ಕೆ ತುರ್ತು ಪರಿಸ್ಥಿತಿ ಘೋಷಿಸಿದ್ದು,ರಾಷ್ಟ್ರದ ಹೊಸ ಪ್ರಧಾನ ಮಂತ್ರಿ ಕ್ರಿಸ್ ಹಿಪ್ಕಿನ್ಸ್ ಅವರು ವೈಮಾನಿಕ ಪರಿಶೀಲನೆ ನಡೆದಿದ್ದು, ಪ್ರವಾಹದಿಂದ ಸಂಭವಿಸಿದ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜಸಿಂದಾ ಆರ್ಡೆರ್ನ್ ರಾಜೀನಾಮೆ ನೀಡಿದ ನಂತರ ಹಿಪ್ಕಿನ್ಸ್ ಬುಧವಾರ ಉನ್ನತ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರವಾಹದಿಂದಾಗಿ ಎಲ್ಲಾ ವಿಮಾನಗಳನ್ನು ಸ್ಥಗಿತಗೊಂಡಿದ್ದು, ಟರ್ಮಿನಲ್‌ನ ಕೆಲವು ಭಾಗಗಳು ಜಲಾವೃತಗೊಂಡ ನಂತರ ನೂರಾರು ಜನರು ರಾತ್ರಿಯಿಡಿ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಹವಾಮಾನ ಏಜೆನ್ಸಿಗಳ ಪ್ರಕಾರ ಶುಕ್ರವಾರ ಆಕ್ಲೆಂಡ್‌ನಲ್ಲಿ ದಾಖಲೆಯ 15 ಸೆಂಟಿಮೀಟರ್‌ಗಳಿಗಿಂತ ಹೆಚ್ಚು (6 ಇಂಚು) ಮಳೆ ಸುರಿದಿದೆ ಎಂದು ಮಾಹಿತಿ ನೀಡಿದೆ.

ಹಿಪ್ಕಿನ್ಸ್ ನಂತರ ಮೂರು ಜನರು ಮೃತಪಟ್ಟಿದ್ದು, ಸುಮಾರು 3,500 ಮನೆಗಳಲ್ಲಿ ವಿದ್ಯುತ್ ಸೌಲಭ್ಯ ಕಡಿತಗೊಂಡಿದೆ.