ಸಿಎಂ ಇಬ್ರಾಹಿಂ- ಸಿದ್ದರಾಮಯ್ಯ ಮಾತಿನ ಚಕಮಕಿ ಕುರಿತ ಬಿಜೆಪಿ ವಿಡಿಯೋ ವೈರಲ್!

ಸಿಎಂ ಇಬ್ರಾಹಿಂ- ಸಿದ್ದರಾಮಯ್ಯ ಮಾತಿನ ಚಕಮಕಿ ಕುರಿತ ಬಿಜೆಪಿ ವಿಡಿಯೋ ವೈರಲ್!

ಬೆಳಗಾವಿ: ಬುಧವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ನಡುವಿನ ಮಾತಿನ ಚಕಮಕಿ ವಿಡಿಯೋ ಕ್ಲಿಪ್'ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಇಬ್ಬರು ನಾಯಕರು ಅವಾಚ್ಯ ಶಬ್ಧಗಳಿಂದ ಒಬ್ಬರನ್ನೊಬ್ಬರು ನಿಂದಿಸಿರುವುದು ಕಂಡು ಬಂದಿದೆ.

ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ‌ ಹಾಗೂ ಸಿ.ಎಂ. ಇಬ್ರಾಹಿಂ ಅವರ ಅದ್ಭುತ ವಾಗ್ಝರಿ. ಇದೇ ಸಿದ್ದರಾಮಯ್ಯ ಅವರು ಅವರು ಬೇರೆಯವರಿಗೆ ಸಂಸದೀಯ ವ್ಯವಸ್ಥೆಯ ಬಗ್ಗೆ ಪಾಠ ಮಾಡುತ್ತಾರೆ, ಎಂತಹ ವಿಪರ್ಯಾಸ ಎಂದು ಹೇಳಿಕೊಂಡಿದೆ.