ವಿಧಾನಸಭಾ ಚುನಾವಣೆ ಹಿನ್ನೆಲೆ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 148 ಇನ್ಸ್​ಪೆಕ್ಟರ್​ಗಳ ವರ್ಗಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ

ವಿಧಾನಸಭಾ ಚುನಾವಣೆ ಹಿನ್ನೆಲೆ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 148 ಇನ್ಸ್​ಪೆಕ್ಟರ್​ಗಳ ವರ್ಗಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಚುನಾವಣಾ ಸಮಯ ಹತ್ತಿರುವಾಗುತ್ತಿದ್ದಂತೆ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಅಧಿಕಾರಗಳ ವರ್ಗಾವಣೆ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಯಾವುದೇ ಅಡೆತಡೆ ಹಾಗೂ ಗೊಂದಲವಿಲ್ಲದೆ ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲು ಚುನಾವಣಾ ಆಯೋಗ ಪ್ರತಿ ಬಾರಿ ಈ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಕಳೆದ ವಾರ ಜ.25ರಂದು ಒಂದೇ ದಿನ 23 ಡಿವೈಎಸ್​ಪಿಗಳ ವರ್ಗಾವಣೆ ಆದೇಶ ಹೊರಬಂದಿತ್ತು. ನಿನ್ನೆ (ಜ.31) ಮತ್ತೊಮ್ಮೆ 40 ಡಿವೈಎಸ್​ಪಿಗಳು ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಏಳು ಮಂದಿ ಎಸ್​ಪಿ (ಸಿವಿಎಲ್​) (ನಾನ್​ ಐಪಿಎಸ್​)ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಇದೀಗ ಬರೋಬ್ಬರಿ 148 ಪೊಲೀಸ್​ ಇನ್ಸ್​​​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಪೊಲೀಸ್​ ಇನ್ಸ್​ಪೆಕ್ಟರ್​ಗಳು ಹಾಗೂ ವರ್ಗಾವಣೆಯಾದ ಸ್ಥಳದ ಸಂಪುರ್ಣ ಮಾಹಿತಿ ಈ ಕೆಳಕಂಡಂತಿದೆ.