ಗ್ರಾಹಕರಿಗೆ ಮತ್ತೊಂದು ಶಾಕ್ : 'ಮೊಟ್ಟೆ' ಬೆಲೆಯಲ್ಲಿ ಭಾರೀ ಏರಿಕೆ

ಗ್ರಾಹಕರಿಗೆ ಮತ್ತೊಂದು ಶಾಕ್ : 'ಮೊಟ್ಟೆ' ಬೆಲೆಯಲ್ಲಿ ಭಾರೀ ಏರಿಕೆ

ಬೆಂಗಳೂರು : ಮೊಟ್ಟೆ ಅಂದ್ರೆ ಯಾರಿಗೆ ಇಷ್ಟ ಹೇಳಿ.. ಅದರಲ್ಲೂ ಮೊಟ್ಟೆಯಿಂದ ತಯಾರಿಸಬಹುದಾದ ಅಮ್ಲೇಟ್, ಮೊಟ್ಟೆ ಕರ್ರಿ, ಎಗ್ ಬುರ್ಜಿ, ಎಗ್ ರೋಲ್, ಹೀಗೆ ಹೇಳ್ತಿದ್ರೆ ಬಾಯಲ್ಲಿ ನೀರೂರಿಸುವುದು ಗ್ಯಾರಂಟಿ..ಆದ್ರೆ ಇದೀಗ ಮೊಟ್ಟೆ ಪ್ರಿಯರಿಗೆ ಶಾಕ್ ಎದುರಾಗುವಂತಹ ಮಟ್ಟಕ್ಕೆ ಶರವೇಗದಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗುತ್ತಿದೆ.

ಮೊಟ್ಟೆ ಬೆಲೆ ಏರಿಕೆಯತ್ತ ಸಾಗುತ್ತಿದ್ದು, ಸದ್ಯ ರಿಟೇಲ್ ಶಾಪ್ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಗೆ ತಲುಪಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಆಗಿದೆ ಎನ್ನಲಾಗಿದೆ.

ಅದರಲ್ಲೂ ಬೆಂಗಳೂರಿನ ನಗರದಲ್ಲಿ ಮೊಟ್ಟೆಯ ಬೆಲೆ ಭಾರೀ ಏರಿಕೆಯಾಗುತ್ತಿದೆ. ಜನರಿಗೆ ತಿಂಗಳನಲ್ಲಿ ದರ ಕಡಿಮೆಯಾಗಿತ್ತು. ದಿನದಿಂದ ದಿನಕ್ಕೆ ಐಟಿಸಿಟಿ ಬೆಂಗಳೂರಿನಲ್ಲಿ ಬೆಲೆ ಹೆಚ್ಚಳದಿಂದಾಗಿ ಜನ ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.ಕೋಳಿಗಳಿಗೆ ನೀಡುವ ಆಹಾರ ಹಾಗೂ ಮೊಟ್ಟೆಗಳ ರವಾನೆಗೆ ತಗುಲುವ ವೆಚ್ಚದಿಂದಾಗಿ ಗ್ರಾಹಕರಿಗೆ ದರಗಳ ಏರಿಕೆ ಬಿಸಿ ತಟ್ಟಿದೆ. ಜನವರಿಯಲ್ಲಿ 100 ಮೊಟ್ಟೆಗಳ ಬ್ಯಾಚ್ಗೆ ಸರಾಸರಿ 568.86 ರೂಪಾಯಿ ಇದೆ. ಆದರೆ 2022 ರಲ್ಲಿ ಈ ಬೆಲೆ 468.06ರಷ್ಟಿದ್ದರೆ, 2021 ರಲ್ಲಿ 437.58 ಮತ್ತು 2020 ರಲ್ಲಿ 437.06 ರೂಪಾಯಿ ಇತ್ತು.

ಮೊಟ್ಟೆಯ ಬೆಲೆ ಸಾಮಾನ್ಯವಾಗಿ ಜೂನ್-ಜುಲೈ ಮತ್ತು ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಗರಿಷ್ಠ ಮಟ್ಟದಲ್ಲಿರುತ್ತದೆ (ಸರಾಸರಿ ಬೆಲೆ ನವೆಂಬರ್ನಲ್ಲಿ 537.67 ಮತ್ತು ಡಿಸೆಂಬರ್ನಲ್ಲಿ 549.84 ಆಗಿತ್ತು).10 ದಿನಗಳ ನಂತರ ಮೊದಲ ಬಾರಿಗೆ ಜನವರಿ 21 ರಂದು ಮಾತ್ರ ಮೊಟ್ಟೆಯ ಬೆಲೆ 550 ರೂ.ಗೆ ಕುಸಿಯಿತು. ಆದರೀಗ 100 ಮೊಟ್ಟೆಗಳ ಬ್ಯಾಚ್ಗೆ ಸರಾಸರಿ 568.86 ರೂಪಾಯಿ ಆಗಿದೆ. ಸಗಟು ದರ 5.75 ರೂ.ಗೆ ಉಳಿದುಕೊಂಡಿದ್ದು, ಒಂದಕ್ಕೆ 6 ರೂ.ಗೆ ಮೊಟ್ಟೆ ಖರೀದಿಸಲಾಗುತ್ತಿದೆ ಮಾರುಕಟ್ಟೆ ಮಾಲೀಕರು ತಿಳಿಸುತ್ತಾರೆ.ಆದರೆ ಹೆಚ್ಚಿನ ಸಗಟು ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗಿದೆ, ಕೆಲವು ಅಂಗಡಿಗಳಲ್ಲಿ ಒಂದು ಮೊಟ್ಟೆಯ ಬೆಲೆ 6.7-ರೂ. 7 ಕ್ಕೆ ಏರಿಕೆಯನ್ನು ಕಂಡಿದೆ ಎಂದು ಎನ್ನಲಾಗಿದೆ. ಇದ್ರಿಂದ ಚಳಿಗಾಲದಲ್ಲಿ ಮೊಟ್ಟೆಯನ್ನು ತಿನ್ನೋದಕ್ಕೆ ಹಿಂದೇಟು ಹಾಕುವುದು ಬೆಳಕಿಗೆ ಬಂದಂತಾಗಿದೆ.