'ಟಿಕ್ ಟಾಕ್ ನಿಷೇಧ'ದ 3 ವರ್ಷಗಳ ನಂತ್ರ ಇಡೀ 'ಭಾರತ ಘಟಕದ ಎಲ್ಲಾ ಉದ್ಯೋಗಿಗಳ ವಜಾ

'ಟಿಕ್ ಟಾಕ್ ನಿಷೇಧ'ದ 3 ವರ್ಷಗಳ ನಂತ್ರ ಇಡೀ 'ಭಾರತ ಘಟಕದ ಎಲ್ಲಾ ಉದ್ಯೋಗಿಗಳ ವಜಾ

ವದೆಹಲಿ : ಭಾರತದಲ್ಲಿ ಟಿಕ್ ಟಾಕ್ ಅನ್ನು ನಿಷೇಧಿಸಿದ ಸುಮಾರು ಮೂರು ವರ್ಷಗಳ ನಂತರ, ಬೈಟ್ ಡ್ಯಾನ್ಸ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಟಿಕ್ ಟಾಕ್ ಭಾರತ ಘಟಕದ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧಾರಿಸಿದೆ.

ಕಳೆದ ಮೂರು ವರ್ಷಗಳ ಹಿಂದೆ ಭದ್ರತೆಯ ಕಾರಣದಿಂದ ಭಾರತದಲ್ಲಿ ಟಿಕ್ ಟಾಕ್ ಗೆ ನಿಷೇಧ ಹೇರಲಾಗಿತ್ತು. ಅಂದಿನಿಂದ ಟಿಕ್ ಟಾಕ್ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಭಾರತದ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಿದೆ. ಬೈಟ್ ಡ್ಯಾನ್ಸ್ ಭಾರತ ಸರ್ಕಾರ ಜತೆಗಿನ ಒಪ್ಪಂದ ಷರತ್ತು ಪೂರೈಸಲು ವಿಫಲವಾದ ಬಳಿಕ ಭಾರತದ ಘಟಕದ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ ಟಿಕ್ ಟಾಕ್ ಗೆ ನಿಷೇಧ ಹೇರಿದ ನಂತರ ಉದ್ಯೋಗಿಗಳು ದುಬೈ ಮತ್ತು ದಕ್ಷಿಣ ಅಮೆರಿಕದ ಟಿಕ್ ಟಾಕ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.

'ನಾವು ಭಾರತದ ಕಚೇರಿಯಲ್ಲಿರುವ ಎಲ್ಲಾ 40 ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡಿದ್ದು, ಅವರಿಗೆ 9 ತಿಂಗಳ ವೇತನವನ್ನು ಪರಿಹಾರವಾಗಿ ನೀಡಲಾಗುವುದು. ಈ ಉದ್ಯೋಗಿಗಳ ಕಾರ್ಯಕ್ಷಮತೆಗೆ ಅಭಿನಂದನೆಗಳು' ಎಂದು ಟಿಕ್ ಟಾಕ್ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ