ಈಗಿನ ಸಿನಿಮಾಗಳಲ್ಲಿ ನಮ್ಮ ನೆಲದ ಕಥೆ ಇರಲ್ಲ, ಹಾಲಿವುಡ್‌ ಸಂಪ್ರದಾಯವೇ ಹೆಚ್ಚು..!

ಈಗಿನ ಸಿನಿಮಾಗಳಲ್ಲಿ ನಮ್ಮ ನೆಲದ ಕಥೆ ಇರಲ್ಲ, ಹಾಲಿವುಡ್‌ ಸಂಪ್ರದಾಯವೇ ಹೆಚ್ಚು..!

ಬೆಂಗಳೂರು : ನಾವು ಸಿನಿಮಾವನ್ನು ಪ್ರೇಕ್ಷಕರಿಗಾಗಿ ನಿರ್ಮಿಸುತ್ತೇವೆ, ನಮಗಾಗಿ ಅಲ್ಲ. ಸಿನಿಮಾಗಳಲ್ಲಿ ಬಾಲಿವುಡ್‌ ಶೈಲಿಯನ್ನು ನಾವ್ಯಾಕೆ ಅಳವಡಿಸಿಕೊಳ್ಳಬೇಕು ಅವರೇ ತೋರಿಸುತ್ತಿದ್ದಾರೆ. ನಾವು ನಮ್ಮ ಜನರಿಗೆ ಏನು ಬೇಕು..? ನಮ್ಮ ಹಳ್ಳಿ, ನೆಲ ಜಲದ ಕಥೆಯ ಮೌಲ್ಯಗಳನ್ನು ಸಿನಿಮಾಗಳಲ್ಲಿ ತೋರಿಸಬೇಕು ಎಂದು ನಟ ರಿಷಬ್‌ ಶೆಟ್ಟಿ ಬಾಲಿವುಡ್‌ನಲ್ಲಿ ಪಾಶ್ಚಿಮಾತ್ಯ ಸಂಪ್ರದಾಯ ಅಳವಡಿಕೆ ಕುರಿತು ಹೇಳಿದರು.

ಹಿಂದೂಸ್ತಾನ್ ಟೈಮ್ಸ್‌ನೊಂದಿಗೆಮಾತನಾಡಿ, ಭಾರತದಲ್ಲಿ ಪಾಶ್ಚಿಮಾತ್ಯ ಪ್ರಭಾವವು ಹೆಚ್ಚಿದೆ. ಇದು ಚಲನಚಿತ್ರ ನಿರ್ಮಾಪಕರನ್ನು ಹಾಲಿವುಡ್ ಶೈಲಿಯ ಸಿನಿಮಾ ಮಾಡಲು ಪ್ರೇರೆಪಿಸುತ್ತಿದೆ. ನಾವು ಸಿನಿಮಾವನ್ನು ಪ್ರೇಕ್ಷಕರಿಗಾಗಿ ಮಾಡುತ್ತೇವೆ, ನಮಗಾಗಿ ಅಲ್ಲ. ನಾವು ಅವರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅವರ ಜೀವನ ವಿಧಾನ, ಭಾವನೆಗಳಿಗೆ ಅನುಗುಣವಾಗಿ ಸಿನಿಮಾ ಮಾಡಬೇಕು. ಈಗಿನ ಸಿನಿಮಾಗಳಲ್ಲಿ ಬಾಲಿವುಡ್‌ ಸಂಪ್ರದಾಯ ಹೆಚ್ಚುತ್ತಿದೆ ಎಂದರು

ಅಲ್ಲದೆ, ಬಾಲಿವುಡ್‌ನವರು ಒಳ್ಳೆಯ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಜನ ನೋಡುತ್ತಿದ್ದಾರೆ. ಮತ್ಯಾಕೆ ನಾವು ಅವರ ಶೈಲಿಯಲ್ಲಿ ಸಿನಿಮಾ ಮಾಡ್ಬೇಕು ಅಲ್ಲವೆ. ನಾವು ನಮ್ಮ ನೆಲದ ಕಥೆ ತೊರಿಸಬೇಕು. ನಮ್ಮ ಪ್ರಾದೇಶಿಕ ಕಥೆಗಳಂತೆ ಜಗತ್ತಿನಲ್ಲಿ ಬೇರೆಲ್ಲೂ ಕಥೆ ಸಿಗುವುದಿಲ್ಲ. ಕಾಂತಾರದಂತಹ ಸಂಪೂರ್ಣವಾದ ಪ್ರಾದೇಶಿಕ ಕಥೆಯನ್ನು ಬೇರೆಲ್ಲಿಯೂ ನೋಡಲಾಗುವುದಿಲ್ಲ. ಈಗ, OTT ನಲ್ಲಿ, ನೀವು ಪಾಶ್ಚಿಮಾತ್ಯ ತುಂಬಿ ತುಳುಕುತ್ತಿವೆ. ಆದರೆ ಅಲ್ಲಿ ನಿಮಗೆ ಸಿಗದಿರುವುದು ನಮ್ಮ ಹಳ್ಳಿಯ ಕಥೆ, ನಮ್ಮ ಕಥೆ, ಪ್ರಾದೇಶಿಕ ಕಥೆ ಮರೆಯಾಗಿದೆ. ನಿಮಗೆ ಜಗತ್ತಿನಲ್ಲಿ ಎಲ್ಲಿಯೂ ಇವುಗಳು ಸಿಗುವುದಿಲ್ಲ.

ಕಾಂತಾರ ಚಿತ್ರವು ಕನ್ನಡ ಮತ್ತು ಹಿಂದಿ ಆವೃತ್ತಿಯಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 14 ರಂದು ಬಿಡುಗಡೆಯಾಯಿತು. ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಮತ್ತು ಕಿಶೋರ್ ಕುಮಾರ್ ಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ.