ಡಿ.18ರ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ; ನಿವೃತ್ತಿ ಖಚಿತಪಡಿಸಿದ ಮೆಸ್ಸಿ
ಡಿಸೆಂಬರ್ 18ರಂದು ನಡೆಯುವ ಫಿಫಾ ವಿಶ್ವಕಪ್ 2022ರ ಫೈನಲ್ ಪಂದ್ಯ ತನ್ನ ಕೊನೆಯ ಆಟ ಎಂದು ಅರ್ಜೆಂಟಿನಾ ತಂಡದ ನಾಯಕ ಹಾಗೂ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಿಳಿಸಿದ್ದಾರೆ. "ಕೊನೆಯ ಪಂದ್ಯವನ್ನು ಫೈನಲ್ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣ ಅಂತ್ಯವಾಗಲಿದೆ. ಸತತ ಪ್ರಯತ್ನಗಳಿಂದಾಗಿ ಪ್ರಶಸ್ತಿ ಗೆಲ್ಲಲು ಇನ್ನು ಒಂದು ಹೆಜ್ಜೆ ಹಿಂದಿದ್ದೇವೆ. ಈ ಪ್ರಶಸ್ತಿ ಗೆಲ್ಲಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ" ಎಂದು ಮೆಸ್ಸಿ ಹೇಳಿರುವುದಾಗಿ ವರದಿಯಾಗಿದೆ.