ಧಾರವಾಡ: ಬಸವಪೂರ್ವ ಯುಗದ, ಸುಮಾರು ಸಾವಿರ ವರುಷಗಳ ಚಾರಿತ್ರಿಕ ಘನತೆಯನ್ನು ಹೊಂದಿರುವ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮಿಗಳವರ ೮೮ನೆಯ ವರ್ಧಂತಿ ಸಮಾರಂಭ ರವಿವಾರ, ಆಗಷ್ಟ-೧೫ ರಂದು ಮುಂಜಾನೆ ೧೧.೩೦ ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ.
೧೯೩೪ರಲ್ಲಿ ಜನಿಸಿರುವ ಶ್ರೀಗಳು, ಕೇವಲ ೫ ವರ್ಷದವರಿದ್ದಾಗಲೇ ಸನ್ಯಾಸ ದೀಕ್ಷೆಗೆ ಒಳಗಾಗಿದ್ದಾರೆ. ನಿರಂತರ ಶಿವಪೂಜಾ ತಪೋನುಷ್ಠಾನ ಮಾಡಿರುವ ಇವರು, ತಮ್ಮ ಸುದೀರ್ಘ ೮೭ ವರ್ಷಗಳ ಸನ್ಯಾಸದ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತ ಸಂಕುಲದ ಸಹಕಾರದೊಂದಿಗೆ ೧೯೬೫ರಲ್ಲಿ ಶ್ರೀಶಾಂತೇಶ್ವರ ಪೌಢ ಶಾಲೆಯನ್ನು ಮತ್ತು ೧೯೯೧ರಲ್ಲಿ ಕನ್ನಡ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸುವ ಮೂಲಕ ವಿದ್ಯಾವಿಕಾಸಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.
ಶಾಂತಲಿAಗ ಶ್ರೀಗಳ ೮೮ನೆಯ ವರ್ಧಂತಿ ಮಹೋತ್ಸವ ಮತ್ತು ಭಾರತದ ೭೫ನೇ ಸ್ವಾತಂತ್ರö್ಯ ದಿನೋತ್ಸವದ ನೆನಪಿನಲ್ಲಿ ನಿರಾಮಯ ಫೌಂಡೇಷನ್ ವತಿಯಿಂದ ರವಿವಾರ ಮುಂಜಾನೆ ೯ ಗಂಟೆಗೆ ಪಂಚಗೃಹ ಹಿರೇಮಠದ ಆವರಣದಲ್ಲಿಯೇ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಕೋವಿಡ್-೧೯ ನಿಯಮಗಳ ಅನುಪಾಲನೆಯೊಂದಿಗೆ ಅತ್ಯಂತ ಸರಳವಾಗಿ ವರ್ಧಂತ್ಯುತ್ಸವ ಜರುಗಲಿದೆ ಎಂದು ಪಂಚಗೃಹ ಹಿರೇಮಠದ ವ್ಯವಸ್ಥಾಪಕ ಶಿವಾನಂದಸ್ವಾಮಿ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.