ಹುಬ್ಬಳ್ಳಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ-ಪರೇಡ್ ವೀಕ್ಷಿಸಿದ ನಿವೃತ್ತ ಇನ್ಸ್ ಪೆಕ್ಟರ್

ಹುಬ್ಬಳ್ಳಿ :- ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಸತ್ಕರಿಸುವ ಉದ್ದೇಶದಿಂದ ಆಚರಿಸಲಾಗುವ ಪೊಲೀಸ್ ಧ್ವಜ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲೂ ಆಚರಿಸಲಾಯಿತು.
ನಗರದ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತ್ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪೋಲಿಸ್ ಇನ್ಸ್ ಪೆಕ್ಟರ್ ಎ.ಆರ್.ಕುಲಕರ್ಣಿ ಅವರು ತೆರೆದ ವಾಹನದಲ್ಲಿ ತೆರಳಿ ಪರೇಡ್ ವೀಕ್ಷಿಸಿದರು. ನಿವೃತ್ತ ಪೋಲಿಸ್ ಇನ್ಸ್ ಪೆಕ್ಟರ್ ಅರುಣಕುಮಾರ ಸಾಳುಂಕೆ ಅವರನ್ನು ಅತಿಥಿಗಳನ್ನಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಲಾಯಿತು. ಆಕರ್ಷಕ ಪಥಸಂಚಲನದ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೋಲಿಸ್ ಆಯುಕ್ತ ಲಾಬೂರಾಮ್ ಅವರು, ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸ್ ಧ್ವಜ ಮಾರಾಟದಿಂದ ಬಂದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ಹಾಗೂ ಅವರ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುತ್ತದೆ ಎಂದ್ರು
ಈ ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಎಸ್.ವಿ ಯಾದವ್, ಸಾಹಿಲ್ ಬಾಗಲಾ, ಎಸಿಪಿಗಳಾದ ಆರ್.ಕೆ.ಪಾಟೀಲ್, ತಾಯಪ್ಪ ದೊಡ್ಡಮನಿ, ಗಣ್ಯರಾದ ಮಾಜಿ ಸಂಸದ ಐ.ಜಿ. ಸನದಿ, ಉದ್ಯಮಿ ವಿ.ಎಸ್.ವಿ ಪ್ರಸಾದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ರು.