ಮನೆಗೆ ಕರೆ ಮಾಡಿ ಹೇಳಿಯೇ ಆತ್ಮಹತ್ಯೆ ಮಾಡಿಕೊಂಡ ಯುವಕ!; ಶೂಟ್ ಮಾಡಿಕೊಂಡು ಸಾವು..

ಕೊಡಗು: ನಿನ್ನೆ ಕಾರು ಅಪಘಾತಕ್ಕೀಡಾಗಿ ಬೇಸರದಲ್ಲಿದ್ದ ಯುವಕ ಇಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಈ ಪ್ರಕರಣ ನಡೆದಿದೆ.
ನಾಪಂಡ ರಾಜೇಶ್ ಚಂಗಪ್ಪ(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತನ ಕಾರು ನಿನ್ನೆ ಸಂಜೆ ಅಪಘಾತಕ್ಕೀಡಾಗಿತ್ತು. ನಂತರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಗೆ ಕರೆ ಮಾಡಿದ್ದ ಈತ ಬಳಿಕ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಮೂವತೋಕ್ಲು ಗ್ರಾಮದಲ್ಲಿ ಶವ ಪತ್ತೆಯಾಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.