ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಗೊತ್ತಾ?

ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಗೊತ್ತಾ?

ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಹಾಲು ಪ್ರಯೋಜನಕಾರಿಯಾಗಿದ್ದು, ಹಾಲು ಕುಡಿಯೋದ್ರಿಂದ ಆರೋಗ್ಯ ಉತ್ತಮಗೊಳ್ಳುತ್ತೆ. ಹಾಲಿನಲ್ಲಿ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಇದು ನಿಮ್ಮ ಹಲ್ಲುಗಳು ಮತ್ತು ಮೂಳೆಗಳನ್ನ ಬಲಪಡಿಸುತ್ತದೆ. ಅದಕ್ಕಾಗಿಯೇ ವೈದ್ಯರು ದೈನಂದಿನ ಆಹಾರದಲ್ಲಿ ಹಾಲನ್ನು ಸೇರಿಸಲು ಶಿಫಾರಸು ಮಾಡುತ್ತಾರೆ, ವಿಶೇಷವಾಗಿ ಸಣ್ಣ ಮತ್ತು ಬೆಳೆಯುತ್ತಿರುವ ಮಕ್ಕಳಿಗೆ ಹಾಲು ಕುಡಿಯುವುದು ತುಂಬಾನೇ ಒಳ್ಳೆಯದು.

ಹಸುವಿನ ಹಾಲು ಹೆಚ್ಚು ಪೌಷ್ಟಿಕವಾಗಿದೆಯೇ ಅಥವಾ ಎಮ್ಮೆಯ ಹಾಲು ಹಸುವಿನ ಹಾಲನ್ನ ಕುಡಿಯಬೇಕೇ ಅನ್ನೋ ಗೊಂದಲ ಬಹುತೇಕ ಜನರಿಗೆ ಇದೆ. ಆದ್ರೆ, ನೆನಪಿಡಿ, ಹಾಲು ಯಾವುದೇ ಆಗಿರ್ಲಿ ಪ್ರಯೋಜನಕಾರಿ. ಆದ್ರೆ, ನಿಮಗೂ ಗೊಂದಲವಿದ್ದರೆ, ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಮತ್ತು ಯಾವ ಹಾಲನ್ನ ಕುಡಿಯುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಹಸುವಿನ ಹಾಲು ಕುಡಿಯಿರಿ. ಇದು ತೂಕವನ್ನ ಕಡಿಮೆ ಮಾಡಲು ಸಹಾಯಕಾರಿ. ಯಾಕಂದ್ರೆ, ಹಸುವಿನ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬು ಇರುತ್ತದೆ. ಹಸುವಿನ ಹಾಲಿನಲ್ಲಿ 3 ರಿಂದ 4 ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುತ್ತದೆ, ಆದರೆ ಎಮ್ಮೆಯ ಹಾಲಿನಲ್ಲಿ ಅದೇ ಪ್ರಮಾಣದಲ್ಲಿ 7 ರಿಂದ 8 ಪ್ರತಿಶತದಷ್ಟು ಕೊಬ್ಬು ಇರುತ್ತದೆ.