ಎಚ್​​ಡಿಕೆ ಕೊರಳಿಗೆ ಬೃಹತ್ ಚಕೋತಾ, ಕ್ಯಾಪ್ಸಿಕಂ ಹಾರ ಹಾಕಿದ ಜೆಡಿಎಸ್ ಕಾರ್ಯಕರ್ತರು.

ಎಚ್​​ಡಿಕೆ ಕೊರಳಿಗೆ ಬೃಹತ್ ಚಕೋತಾ, ಕ್ಯಾಪ್ಸಿಕಂ ಹಾರ ಹಾಕಿದ ಜೆಡಿಎಸ್ ಕಾರ್ಯಕರ್ತರು.

ದೇವನಹಳ್ಳಿ: ಚುನಾವಣಾ ಸಮಯ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರು ಸುತ್ತಾಟ ಆರಂಭಿಸಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲಾ ಅದ್ಧೂರಿ ಸ್ವಾಗತ ಸಿಗುತ್ತಿದೆ. ಅದರಲ್ಲೂ ಹಿರಿಯ ನಾಯಕರು ಪ್ರಚಾರಕ್ಕೆಂದು ತೆರಳಿದಾಗ ಹಣ್ಣಿನ ಹಾರ ಹಾಕಿ ಸ್ವಾಗತಿಸುವ ಟ್ರೆಂಡ್ ಹೆಚ್ಚಾಗುತ್ತಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ ಅಂತೆಯೇ ಡಿ.ಕೆ. ಶಿವಕುಮಾರ್ ಮುಂತಾದ ರಾಜಕಾರಣಿಗಳಿಗೆ ಸೇಬು, ದಾಳಿಂಬೆ ಮುಂತಾದ ಹಣ್ಣುಗಳಿಂದ ಮಾಡಿದ ಹಾರಗಳನ್ನು ಹಾಕುತ್ತಿದ್ದರು.

ಇದೀಗ ಜೆಡಿಎಸ್ ಪಂಚರತ್ನ ರಥಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸಿದೆ. ಈ ವೇಳೆ ದೇವನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿಗೆ ಇಲ್ಲಿನ ಜೆಡಿಎಸ್​ ಮುಖಂಡರು ಚಕ್ಕೋತ ಹಣ್ಣಿನ ಬೃಹತ್ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಹೂವಿನ ಮಳೆ ಸುರಿಸಿ ಎಚ್​​ಡಿಕೆಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಎಚ್.ಡಿ.ಕುಮಾರಸ್ವಾಮಿಗೆ ಸ್ಥಳಿಯ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದ್ದಾರೆ.

ಪಂಚರತ್ನ ರಥಯಾತ್ರೆ ಕೊರಮಂಗಲ ಗ್ರಾಮ ತಲುಪುತ್ತಿದ್ದಂತೆ ಇಲ್ಲಿನ ಜನರು, ಕ್ಯಾಪ್ಸಿಕಂನ ಬೃಹತ್ ಹಾರ ಹಾಕಿ ಸ್ವಾಗತಿಸಿದ್ದಾರೆ. ಇದಕ್ಕಾಗಿ 500 ಕೆ.ಜಿ ಕ್ಯಾಪ್ಸಿಕಂ ಬಳಸಿಕೊಂಡಿದ್ದು, ಜೆಡಿಎಸ್​ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಲಭಿಸಿದೆ.

ದೇವನಹಳ್ಳಿ ಭಾಗದ ಜನರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ದೇವನಹಳ್ಳಿಯಲ್ಲಿ ಬೆಳೆಯುವ ಚಕೋತಾಕ್ಕೆ ಭಾರಿ ಬೇಡಿಕೆಯೂ ಇದೆ. ಹೀಗಾಗಿ ಇಲ್ಲಿನ ಜನರು ಚಕೋತಾ ಹಾರ ಹಾಕಿ ಕುಮಾರಸ್ವಾಮಿಯನ್ನು ಸ್ವಾಗತಿಸಿ