ಅಮೇರಿಕಾದಲ್ಲಿ ಗುಂಡಿಕ್ಕಿ ಭಾರತೀಯ ವ್ಯಕ್ತಿ ಹತ್ಯೆ ; ಒಂದೇ ವಾರದಲ್ಲಿ 2ನೇ ಪ್ರಕರಣ

ನ್ಯೂಯಾರ್ಕ್: ಅಮೆರಿಕದಲ್ಲಿ ಭಾರತೀಯರ ಹತ್ಯೆ ಪ್ರಕರಣಗಳು ವರದುಯಾಗುತ್ತಿವೆ. ಜಾರ್ಜಿಯಾದಲ್ಲಿ 52 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರನ್ನು ಮೂವರು ಮುಸುಕುಧಾರಿ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆಗೈದಿದ್ದು, ಅವರ ಪತ್ನಿ, ಮಗಳು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ
ಈ ಘಟನೆಯು ಜ. 20 ರಂದು ಜಾರ್ಜಿಯಾದ ಹಾರ್ಟ್ಲಿ ಬ್ರಿಡ್ಜ್ ರಸ್ತೆ ಬಳಿಯ ಥೊರೊಬ್ರೆಡ್ ಲೇನ್‌ನಲ್ಲಿ ನಡೆದಿದ್ದು, ಒಂದೇ ವಾರದೊಳಗೆ ಯುಎಸ್‌ನಲ್ಲಿ ಭಾರತೀಯರನ್ನು ಹತ್ಯೆಗೈದ ಎರಡನೇ ಘಟನೆಯಾಗಿದೆ.
ಮೃತರನ್ನು ಪಿನಾಲ್ ಪಟೇಲ್ ಎಂದು ಗುರುತಿಸಲಾಗಿದ್ದು, ಇವರು ಕೆಲಸ ಮುಗಿಸಿಕೊಂಡು ಕುಟುಂಬ ಸಮೇತ ಮನೆಗೆ ತೆರಳುತ್ತಿತ್ತು. ಆ ವೇಳೆ ಮೂವರು ಮುಸುಕುಧಾರಿ ವ್ಯಕ್ತಿಗಳು ಗುಂಡು ಹಾರಿಸಿದ್ದರು. ಪರಿಣಾಮ ಗುಂಡೇಟಿನಿಂದ ಗಾಯಗೊಂದಿದ್ದರು ಎಂದು ಬಿಬ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ತಕ್ಷಣ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪಿನಾಲ್ ಪಟೇಲ್ ಮೃತಪಟ್ಟಿದ್ದು, ಅವರ ಪತ್ನಿ ರೂಪಲ್ಬೆನ್ ಮತ್ತು ಅವರ ಮಗಳ ಸ್ಥಿತಿ ಸ್ಥಿರವಾಗಿದೆ ಎಂದು ಡೆಪ್ಯೂಟಿ ಕರೋನರ್ ಲುವಾನ್ ಸ್ಟೋನ್ ಮಾಹಿತಿ ನೀಡಿದ್ದಾರೆ. .
ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಭಾನುವಾರ ಚಿಕಾಗೋದಲ್ಲಿ ಶಸ್ತ್ರಸಜ್ಜಿತ ದರೋಡೆ ವೇಳೆ ಗುಂಡು ತಗುಲಿ 23 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದನು.