ಯುಪಿ: ಮೇಕೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದು 13 ವರ್ಷದ ಬಾಲಕ ಸಾವು

ಯುಪಿ: ಮೇಕೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದು 13 ವರ್ಷದ ಬಾಲಕ ಸಾವು

ಲ್ಲಿಯಾ(ಉತ್ತರ ಪ್ರದೇಶ): ರೈಲು ಹಳಿಯ ಬಳಿ ಮೇಯುತ್ತಿದ್ದ ಮೇಕೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದು 13 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ರಾಸ್ದಾ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿತನ್ಹರಾ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಂತೋಷ್ ಕುಮಾರ್ ಚೌಹಾಣ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಸಂತೋಷ್ ಚಿತನ್ಹರಾ ಗ್ರಾಮದಲ್ಲಿ ರೈಲ್ವೇ ಹಳಿಯ ಬಳಿ ಮೇಯುತ್ತಿದ್ದ ಮೇಕೆಗಳನ್ನು ರೈಲಿನಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೌವಿನಿಂದ ಬಲ್ಲಿಯಾಗೆ ತೆರಳುತ್ತಿದ್ದ ಗರೀಬ್ ನವಾಜ್ ರೈಲಿಗೆ ಸಂತೋಷ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.