BIG BREAKING NEWS: ಲೋಕಸಭೆಯಲ್ಲಿ ವಿವಾದಿತ ಮೂರು ಕೃಷಿ ಮಸೂದೆಗಳು ವಾಪಾಸ್ : Farm Laws Repeal Bill Passed

ನವದೆಹಲಿ: ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿದಂತ ಮೂರು ವಿವಾದಿತ ಕೃಷಿ ಮಸೂದೆಗಳನ್ನುಇಂದು ಲೋಕಸಭೆಯಲ್ಲಿ ಮಂಡಿಸಿ ವಾಪಾಸ್ ಪಡೆಯಲಾಗಿದೆ. ಈ ಮೂಲಕ ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಗುರುನಾನಕ್ ಜಯಂತಿಯಂದು ರೈತರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಂತ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುತ್ತಿರೋದಾಗಿ ಘೋಷಿಸಿದ್ದರು. ಈ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುವ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿತ್ತು.
ಈ ಎಲ್ಲಾ ವಿದ್ಯಮಾನದ ಬಳಿಕ ಇಂದು ಲೋಕಸಭೆಯಲ್ಲಿ ಕೃಷಿ ಸಚಿವರು ವಿವಾದಿತ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯೋದಕ್ಕೆ ಮಸೂದೆಯನ್ನು ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೇ ಲೋಕಸಭೆಯಲ್ಲಿ ಇಂದು ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯೋದ್ಕಕೆ ಒಪ್ಪಿಗೆ ಸೂಚಿಸಲಾಗಿದೆ. ಆದ್ರೇ ವಿಪಕ್ಷಗಳು ಈ ಕಾಯ್ದೆಗಳ ಕುರಿತಂತೆ ಚರ್ಚೆ ನಡೆಸೋದಕ್ಕೆ ಸಂಸತ್ ನಲ್ಲಿ ಗದ್ದಲ ಎಬ್ಬಿಸಿತು. ಇದರ ನಡುವೆಯೂ ಮಸೂದೆ ಹಿಂಪಡೆಯೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ.