ಭ್ರಷ್ಟ ಸರ್ಕಾರವನ್ನು ಸೋಲಿಸುವ ಮೂಲಕ ನಿಮಗೆ ಗೌರವ ಕೊಡುತ್ತೇವೆ; ಎಐಸಿಸಿ ಅಧ್ಯಕ್ಷರಿಗೆ ಅಭಯ ನೀಡಿದ ಸಿದ್ದರಾಮಯ್ಯ

ಭ್ರಷ್ಟ ಸರ್ಕಾರವನ್ನು ಸೋಲಿಸುವ ಮೂಲಕ ನಿಮಗೆ ಗೌರವ ಕೊಡುತ್ತೇವೆ; ಎಐಸಿಸಿ ಅಧ್ಯಕ್ಷರಿಗೆ ಅಭಯ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ಜನರೇ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ. ಆಡಳಿತ ಸರ್ಕಾರವನ್ನು ಸೋಲಿಸುವ ಮೂಲಕ ನಿಮಗೆ ಗೌರವ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಯ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಪಕ್ಷದ ಹಿರಿಯ ನಾಯಕರಾಗಿ ನಮಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದೀರಿ. ನಾವೆಲ್ಲರೂ ನಿಮ್ಮ ಅನುಭವದ ಮಾತುಗಳನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಬಿಜೆಪಿಯವರು ವಂಶ ಪಾರಂಪರ್ಯ ರಾಜಕೀಯ ಎಂದು ಟೀಕಿಸಿದರು. ಆದರೆ ಅವರ ಮಾತುಗಳು ಸುಳ್ಳಾಗುವಂತೆ, ಅತ್ಯಂತ ಬಹುಮತದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಗೆದ್ದಿದ್ದಾರೆ. ಖರ್ಗೆಯವರ ಈ ಗೆಲುವು ಕಾಂಗ್ರೆಸ್​​ನಲ್ಲಿ ಆತಂರಿಕ ಸ್ವಾಂತಂತ್ರ್ಯ ಇದೆ ಎಂಬುವುದಕ್ಕೆ ಸಾಕ್ಷಿ ಎಂದು ಹೇಳಿದರು.