ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಬಾಲಕ
ಮುಂಬೈ: 9 ವರ್ಷದ ಬಾಲಕಿಯ ಮೇಲೆ 15 ವರ್ಷದ ಬಾಲಕನೊಬ್ಬ ಅತ್ಯಾಚಾರ ನಡೆಸಿ, ಕೊಲೆಗೈದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಡೆದಿದೆ. ಮೃತ ಬಾಲಕಿಯ ತಂದೆಯ ಮೇಲಿನ ಸೇಡಿಗೆ ಅಪ್ರಾಪ್ತ ಆರೋಪಿ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಕಲ್ಯಾಣ್ ರೈಲ್ವೇ ನಿಲ್ದಾಣದ ಬಳಿಯ ಕಲ್ಯಾಣಿ ಪಶ್ಚಿಮ ಪ್ರದೇಶದ ವಸತಿ ಪ್ರದೇಶದ ಆವರಣದಲ್ಲಿ 9 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ.