ಯಶ್-ರಾಧಿಕಾ ಮಗಳು ಐರಾಗೆ ಬರ್ತ್​ಡೇ ಸಂಭ್ರಮ

ಯಶ್-ರಾಧಿಕಾ ಮಗಳು ಐರಾಗೆ ಬರ್ತ್​ಡೇ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳು ಐರಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಡಿಸೆಂಬರ್ 2, 2018ರಂದು ಐರಾ ಹುಟ್ಟಿದ್ದು. ಹುಟ್ಟಿದಾಗಿನಿಂದಲೂ ಸ್ಟಾರ್ ಆಗಿ ಮೆರೆಯುತ್ತಿರುವ ಐರಾ ಇಂದು 4ನೇ ವರ್ಷದ ಜನ್ಮದಿನದ ಖುಷಿಯಲ್ಲಿದ್ದಾರೆ. ಮುದ್ದಿನ ಮಗಳ ಹುಟ್ಟುಹಬ್ಬದಂದು ಪೋಷಕರು ಖುಷಿಯಾಗಿದ್ದಾರೆ. ಐರಾಗೆ ಅಪ್ಪ ಎಂದ್ರೆ ತುಂಬಾ ಇಷ್ಟ. ರಾಧಿಕಾ ಪಂಡಿತ್ ತಮ್ಮ ಮಕ್ಕಳ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡ್ತಾ ಇರ್ತಾರೆ.