ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ!

ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ!

ವದೆಹಲಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ನಷ್ಟದ ಕಾರಣದಿಂದ ಅಧಿಕೃತವಾಗಿ ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಕೇಂದ್ರ ವಿತ್ತ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದ್ದು, ವಿಐಎಸ್ ಪಿ ಕಾರ್ಖಾನೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.

ಹೀಗಾಗಿ ಮುಚ್ಚುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಲಹೆ ಮೇರೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದ 105 ವರ್ಷಗಳ ಹಳೆಯ ಕಾರ್ಖಾನೆಯ ಯುಗಾಂತ್ಯವಾಗಿದೆ.

ವಿಐಎಸ್ ಪಿ ಕಾರ್ಖಾನೆ ಖರೀದಿಗೆ ಬಿಡ್ ಸಲ್ಲಿಸುವ ಮೂಲಕ ಆಸಕ್ತಿ ತೋರಿದವರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಕಾರ್ಖನೆಯಲ್ಲಿನ ಯಂತ್ರಗಳು ಹಳತಾಗಿದೆ. ಅವುಗಳ ಗಾತ್ರ ಸಾಕಷ್ಟಿಲ್ಲ. ನಿರಂತರವಾಗಿ ಕಾರ್ಖಾನೆ ನಷ್ಟದಲ್ಲಿದೆ.ಹೀಗಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಹೇಳಿದ್ದಾರೆ.