ಮಂಡ್ಯದಲ್ಲಿ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡ್ತಿದ್ದ ನಕಲಿ PSI ಅರೆಸ್ಟ್‌

ಮಂಡ್ಯದಲ್ಲಿ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡ್ತಿದ್ದ ನಕಲಿ PSI ಅರೆಸ್ಟ್‌

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿಯ ಸುತ್ತಮುತ್ತ ಪ್ರದೇಶದಲ್ಲಿ ಸಂಚಾರಿಸುತ್ತಿದ್ದ ವಾಹನಗಳನ್ನೆಲ್ಲ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ನಕಲಿ PSI ಅರೆಸ್ಟ್‌ ಮಾಡಲಾಗಿದೆ.ಬೆಂಗಳೂರು ಕೊಟ್ಟಿಗೆರೆ ಮೂಲದ ಸಂಜಯ್‌ (40 )ಬಂಧನ ಮಾಡಲಾಗಿದೆ. ನಕಲಿ ಪೊಲೀಸ್‌ ಎಂದುಕೊಂಡು ಕೆ.ಎಂ ದೊಡ್ಡಿಯ ಸುತ್ತಮುತ್ತ ಪ್ರದೇಶದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದರು, ಹಣ ವಸೂಲಿಯಿಂದ ಬೇಸತ್ತಿದ್ದ, ಸಾರ್ವಜನಿಕರಿಂದ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೆರೆಗೆ ನಕಲಿ ಪಿಎಸ್‌ಐ ಸಂಜಯ್‌ ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಣ ವಸೂಲಿಯಿಂದ ಬೇಸತ್ತಿದ್ದ ಜನರು ನಕಲಿ PSI ಬಂಧನದಿಂದ ನಿಟ್ಟುಸಿರು ಬಿಡುವಂತಾಗಿದೆ.