ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಇಂದು ಪ್ರಧಾನಿ ಮೋದಿ ಆತಿಥ್ಯ

ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಇಂದು ಪ್ರಧಾನಿ ಮೋದಿ ಆತಿಥ್ಯ

ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಪ್ಯಾರಾಲಿಂಪಿಕ್ ನ ಕ್ರೀಡಾ ಪಟುಗಳಿಗೆ ಆತಿಥ್ಯ ವಹಿಸಲಿದ್ದಾರೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದರು.

ಎಲ್ಲಾ ವಿಭಾಗದ ಕ್ರೀಡಾಪಟುಗಳಿಗೆ ಉತ್ತಮ ಹಾಗೂ ವಿಶೇಷ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂದು ಮಾತುಕತೆ ನಡೆಯಲಿದೆ. 2021ರಲ್ಲಿಯೂ ಕೂಡ ಭಾರತದ ಪ್ಯಾರಾ ಅಥ್ಲೇಟ್ಸ್ ಗಳು 19 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೊಂಡಾಡಿದರು.

1984ರಿಂದ ಭಾರತ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದರೂ 2021ರ ಕ್ರೀಡಾಕೂಟ ಅತ್ಯಂತ ವಿಶೇಷಷವಾಗಿದೆ. ಈ ಭಾರಿ ಭಾರತಕ್ಕೆ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳು ಬಂದಿದೆ. ಈ ಹಿಂದಿನ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 12 ಪದಕಗಳನ್ನು ಪಡೆದಿದ್ದ ಭಾರತ ವಿನ್ನ, ಬೆಳ್ಳಿ ಹಾಗೂ ಕಂಚಿನ ತಲಾ 4 ಪದಕಗಳನ್ನು ಗಳಿಸಿತ್ತು.