ಮಗು ಸಮೇತ ನದಿಗೆ ಹಾರಿದ ತಾಯಿ

ಗದಗ 

ಮಲಪ್ರಭಾ ನದಿಗೆ ತಾಯಿ ಮತ್ತು ಮೂರು ವರ್ಷದ ಮಗು ಹಾರಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರು ಗ್ರಾಮದಲ್ಲಿ ನಡೆದಿದೆ. ಉಮಾ ಶೆಲ್ಲಿಕೇರಿ(೪೦) ಮತ್ತು ಮಗಳು ಶ್ರೇಷ್ಠ ಶೆಲ್ಲಿಕೇರಿ(೩) ನದಿಗೆ ಹಾರಿದ ದುರ್ದೈವಿಗಳು. ಉಮಾ ತನ್ನ ೩ ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಲು ಯತ್ನಿಸಿದ್ದಳು. ಇಬ್ಬರೂ ಹೆಣ್ಣು ಮಕ್ಕಳು ಭಯದಿಂದ ತಾಯಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ನಂತರ ೩ ವರ್ಷದ ಮಗಳನ್ನು ನದಿಗೆ ಎಸೆದ ತಾಯಿ ಉಮಾ ಕೂಡ ಆತ್ಮಹತ್ಯ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಸದ್ಯ ತಾಯಿ, ಮಗು ಶವಕ್ಕಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ.