ಬೆಡ್ ಸಿಗದೆ ಮುದ್ದು ಮಕ್ಕಳ ನರಳಾಟ; ಇದು ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ | Gadag |
ಗದಗ ನಗರದ ಕೆಸಿ ರಾಣಿ ರಸ್ತೆಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದ ಮುದ್ದುಮಕ್ಕಳ ನರಳಾಟ ಮನಕಲಕುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯ ಎಲ್ಲಾ ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಪುಟ್ಟಮಕ್ಕಳು ಜ್ವರ, ಕೆಮ್ಮು, ನೆಗಡಿ ಸೇರಿ ನ್ಯುಮೋನಿಯಾದಿಂದ ನರಳುತ್ತಿದ್ದು, ಬೆಡ್ಗಳಿಲ್ಲದ ಕಾರಣ ಒಂದೇ ಬೆಡ್ನಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಬೆಡ್ ಸಿಗದೇ ಖಾಯಿಲೆಗೆ ತುತ್ತಾಗಿರೋ ಮಕ್ಕಳು ಹಾಗೂ ಪೋಷಕರ ವಾಪಾಸು ಮನೆಗೆ ಹೋಗುತ್ತಿದ್ದಾರೆ. ಜಿಮ್ಸ್ ಆಸ್ಪತ್ರೆಯ 100 ಬೆಡ್ ಗಳ ಮಕ್ಕಳ ವಿಶೇಷ ವಾರ್ಡ್ ಕೂಡ ಇನ್ನೂ ಆರಂಭವಾಗಿಲ್ಲ. ಅಲ್ಲದೇ ಕೊರೊನಾ ಭಯದಲ್ಲಿ ಮಕ್ಕಳ ಜೀವದ ಜೊತೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಚೆಲ್ಲಾಟವಾಡುತ್ತಿದೆ ಮತ್ತು ಜೊತೆಗೆ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮಕ್ಕಳ ಪೋಷಕರ ಕಿಡಿಕಾರಿದ್ದಾರೆ.