ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ಯಡವಟ್ಟು : ಕಡ್ಲೆ ಮಿಠಾಯಿ ಚಿಕ್ಕಿಗಾಗಿ ನೂಕು ನುಗ್ಗಲು, ಮಹಿಳೆ ಕಾಲಿಗೆ ಗಾಯ

ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ಯಡವಟ್ಟು : ಕಡ್ಲೆ ಮಿಠಾಯಿ ಚಿಕ್ಕಿಗಾಗಿ ನೂಕು ನುಗ್ಗಲು, ಮಹಿಳೆ ಕಾಲಿಗೆ ಗಾಯ

ದೇವನಹಳ್ಳಿ: ಬೆಂಗಳೂರು ಗ್ರಾಮಂತರ ದೇವನಹಳ್ಳಿ ತಾಲೂಕಿನ ಭುವನಹಳ್ಳಿಯಲ್ಲಿ ಕಡ್ಲೆ ಮಿಠಾಯಿ ಚಿಕ್ಕಿ (barfi) ಗಾಗಿ ಸಾವಿರಾರು ಮಂದಿ ಮುಗಿಬಿದಿದ್ದು, ನೂಕುನುಗ್ಗಲಿನಲ್ಲಿ (rush) ಸಿಕ್ಕು ಮಹಿಳೆ ಓರ್ವ ಕಾಲಿಗೆ ಗಾಯಗೊಂಡ ಘಟನೆ ನಡೆದಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಬಳಿಕ ಈ ಯಡವಟ್ಟು ಜರುಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಬರ್ಪಿ ವಿತರಣೆ ಮಾಡಲಾಗಿದ್ದು, ಕ್ಯಾಂಟರ್​ವೊಂದರಿಂದ ಬರ್ಪಿಗಳನ್ನು ಕಾರ್ಯಕರ್ತರು ತೂರಾಡಿದ್ದಾರೆ.

ಪೊಲೀಸರು ಲಾಠಿ ಬೀಸಿದ್ರು, ಕ್ಯಾರೆ ಎನ್ನದೆ ಮಿಠಾಯಿ ಚಿಕ್ಕಿಗಾಗಿ ಜನರು ಮುಗಿಬಿದ್ದರು. ಕೆಜಿ ಗಟ್ಟಲೆ ಚಿಕ್ಕಿಯನ್ನ ಮಹಿಳೆಯರು, ಮಕ್ಕಳು ಮತ್ತು ವೃದ್ದರು ಹೊತ್ತೊಯ್ದಿದ್ದಾರೆ. ಜನರನ್ನ ನಿಯಂತ್ರಣ ಮಾಡೋಕಾಗದೆ ಪೊಲೀಸರು ತಬ್ಬಿಬ್ಬಾದರು. ನಾಲ್ಕು ಲಾರಿಯಲ್ಲಿ ತಂದಿದ್ದ ಚಿಕ್ಕಿ ಐದೇ ಐದು ನಿಮಿಷದಲ್ಲಿ ಖಾಲಿಯಾಗಿದೆ.