ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

ಬೆಂಗಳೂರು, ಡಿ.30- ವಿಧಾನ ಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಸಮಬಲದ ಪೈಪೋಟಿ ನೀಡಿದ್ದ ಕಾಂಗ್ರೆಸ್ ಡಿಸೆಂಬರ್ 27ರಂದು ನಡೆದ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲಿಯೂ ಮೇಲುಗೈ ಸಾಧಿಸಿದೆ.

ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‍ಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಪಕ್ಷಕ್ಕಿಂತ ಪ್ರತಿಪಕ್ಷ ಕಾಂಗ್ರೆಸ್ ಮುನ್ನಡೆ ಸಾಸಿದೆ. ಜೆಡಿಎಸ್ ಮೂರನೆ ಸ್ಥಾನದಲ್ಲಿದ್ದು, ಬಹುತೇಕ ಕಡೆ ಪಕ್ಷೇತರರು ಪ್ರಾಬಲ್ಯ ಸಾಧಿಸಿ ನಿರ್ಣಾಯಕರಾಗಿದ್ದಾರೆ.

ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಒಟ್ಟಾರೆ 1185 ವಾರ್ಡ್‍ಗಳಲ್ಲಿ ಕಾಂಗ್ರೆಸ್ 501, ಬಿಜೆಪಿ 431 ಅಭ್ಯರ್ಥಿಗಳು ಜಯಗಳಿಸಿದರೆ ಜೆಡಿಎಸ್‍ನಿಂದ 45 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಕ್ಷೇತರರು ಬರೋಬ್ಬರಿ 207 ಮಂದಿ ಜಯ ಸಾಧಿಸಿದ್ದಾರೆ. ನಗರಸಭೆಯಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದ್ದು, ಒಟ್ಟು 166 ಸ್ಥಾನಗಳಲ್ಲಿ 67 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪ್ರಬಲ ಪೈಪೋಟಿ ಒಡ್ಡಿರುವ ಕಾಂಗ್ರೆಸ್ 61ರಲ್ಲಿ ಜಯ ಸಾಧಿಸಿದರೆ ಜೆಡಿಎಸ್ 12ರಲ್ಲಿ ಗೆದ್ದಿದೆ. ಪಕ್ಷೇತರರು 26 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಐದು ನಗರಸಭೆಗಳ ಪೈಕಿ ಚಿಕ್ಕಮಗಳೂರು ಮತ್ತು ಹೆಬ್ಬಗೋಡಿಯಲ್ಲಿ, ಗದಗ ಬೆಟಗೆರಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಶಿರಾ, ಹೊಸಪೇಟೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರರ ಬೆಂಬಲದೊಂದಿಗೆ ಅಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದೆ.
19 ಪುರಸಭೆಗಳಲ್ಲಿ 7 ಕಡೆ ಕಾಂಗ್ರೆಸ್ ಅಕಾರ ಹಿಡಿಯುವ ಬಹುಮತ ಸಾಧಿಸಿದೆ. 5ರಲ್ಲಿ ಬಿಜೆಪಿ, 4ರಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಪಕ್ಷೇತರರು ಪ್ರಾಬಲ್ಯ ಸಾಧಿಸಿ ಅಧಿಕಾರ ಹಿಡಿಯುವತ್ತ ಸಾಗಿದ್ದಾರೆ.

ಅಣ್ಣೆಗೆರೆ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಜಿಗಣಿ ಪುರಸಭೆಯಲ್ಲೂ ಕೂಡ ಕಾಂಗ್ರೆಸ್ ಅಕಾರದ ಗದ್ದುಗೆ ಹಿಡಿದಿದೆ. ಚಂದಾಪುರ ಪುರಸಭೆಯನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ರಾಮನಗರ ಜಿಲ್ಲೆಯ ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದಿದೆ.
ಉಡುಪಿಯ ಕಾಪು ಪುರಸಭೆ ಬಿಜೆಪಿ ಪಾಲಾದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಪ್ರತಿನಿಸಿರುವ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆಗೆ ಏರುವ ಮೂಲಕ ಬಿಜೆಪಿಗೆ ಮುಖಭಂಗ ಉಂಟಾಗಿದೆ.

ರಾಯಭಾಗದ ಮುಗುಳಖೋಡ ಪುರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಸವದತ್ತಿಯ ಮುನವಳ್ಳಿ ಹಾಗೂ ಕಾಗವಾಡದ ಉಗಾರಖುರ್ದ ಪುರಸಭೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕು ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರು ಮೇಲುಗೈ ಸಾಸಿದ್ದಾರೆ. ಹರಭಾವಿ ಪಟ್ಟಣ ಪಂಚಾಯಿತಿಯಲ್ಲೂ ಪಕ್ಷೇತರರು ಮೇಲುಗೈ ಸಾಸಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹಿಡಿತದಲ್ಲಿದ್ದ ಈ ಎರಡೂ ಕ್ಷೇತ್ರಗಳು ಪಕ್ಷೇತರರ ಪಾಲಾಗುವ ನಿರೀಕ್ಷೆ ಇದೆ.

ನಿಡಗುಂದಿ ಪಟ್ಟಣ ಪಂಚಾಯಿತಿ, ವಿಜಯಪುರದ ಕೋಲಾರ ಪ.ಪಂ.ನಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಹಾವೇರಿಯ ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರ ಪುರಸಭೆ ಹಾಗೂ ಗುತ್ತಲ ಪ.ಪಂ.ಗಳು ಕಾಂಗ್ರೆಸ್ ಪಾಲಾಗಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಉತ್ತರ ಕನ್ನಡ ಜಿಲ್ಲೆ , ಭಟ್ಕಳ ಜಾಲಿ ಪ.ಪಂ.ನಲ್ಲಿ ಪಕ್ಷೇತರರು ಪ್ರಾಬಲ್ಯ ಸಾಧಿಸಿದ್ದಾರೆ. ರಾಯಚೂರು ಜಿಲ್ಲೆ, ಸಿರಿವಾಳ ಪ.ಪಂ. ಹಾಗೂ ಕರ್ಕೆರ ಪುರಸಭೆ ಕಾಂಗ್ರೆಸ್ ಪಾಲಾಗಿವೆ. ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಪ.ಪಂ. ಕಾಂಗ್ರೆಸ್ ತೆಕ್ಕೆಗೆ ಹೋಗುವ ಮೂಲಕ ಸಾರಿಗೆ ಸಚಿವ ಶ್ರೀರಾಮುಲುಗೆ ಭಾರೀ ಮುಖಭಂಗವಾಗಿದೆ.

ಪ.ಪಂ.ನ 16 ವಾರ್ಡ್‍ಗಳಲ್ಲಿ ಕಾಂಗ್ರೆಸ್ 9ರಲ್ಲಿ ಗೆಲುವು ಸಾಸಿದರೆ, 3 ವಾರ್ಡ್‍ಗಳಲ್ಲಿ ಪಕ್ಷೇತರರು ಜಯ ಸಾಸಿದ್ದಾರೆ. ಬಿಜೆಪಿ ಇಲ್ಲಿ ಖಾತೆಯಲ್ಲೇ ತೆರೆದಿಲ್ಲ. ಬೆಳಗಾವಿ ಜಿಲ್ಲೆ ಯಾಕ್ಸುಂಬ ಪ.ಪಂ.ನಲ್ಲಿ ಕಾಂಗ್ರೆಸ್ ಜಯ ಸಾಸಿದ್ದು, 17 ವಾರ್ಡ್‍ಗಳ ಪೈಕಿ 10ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ ಕೇವಲ 1 ಕ್ಷೇತ್ರದಲ್ಲಿ ಗೆಲುವು ಸಾಸಿದ್ದು, ಸಚಿವೆ ಶಶಿಕಲಾ ಜೊಲ್ಲೆ ಸ್ವಗ್ರಾಮದಲ್ಲಿ ಕಾಂಗ್ರೆಸ್ ಈ ಮಟ್ಟಿನ ಗೆಲುವು ಸಾಸುವ ಮೂಲಕ ಸಚಿವರಿಗೆ ಮುಖಭಂಗವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎರಡೂ ಪ.ಪಂ.ಗಳು ಬಿಜೆಪಿ ಪಾಲಾಗಿವೆ. ವಿಟ್ಲ ಕೋಟೆಕಾರು ಪ.ಪಂ.ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಸಿದೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಹಾರೊಗೇರಿ ಪುರಸಭೆ ಬಿಜೆಪಿ ಪಾಲಾಗಿದೆ. ಕಕ್ಕೆರ ಪುರಸಭೆಯಲ್ಲಿ ಬಿಜೆಪಿ ಅಕಾರ ಕಳೆದುಕೊಳ್ಳುವ ಮೂಲಕ ಬಿಜೆಪಿ ಶಾಸಕ ರಾಜುಗೌಡಗೆ ಭಾರೀ ಮುಖಭಂಗ ಉಂಟಾಗಿದೆ.

ಕಾಂಗ್ರೆಸ್‍ನ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕನಿಗೆ ಭಾರೀ ಗೆಲುವು ಸಿಕ್ಕಿದೆ. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹಾಗೂ ಮಾಜಿ ಶಾಸಕ ಸುರೇಶ್‍ಬಾಬು ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹೊಸಪೇಟೆ ಜಿಲ್ಲೆ ಕುರಗೋಡು ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

23 ವಾರ್ಡ್‍ಗಳ ಪೈಕಿ 15ರಲ್ಲಿ ಕಾಂಗ್ರೆಸ್, 7 ಬಿಜೆಪಿ, ಪಕ್ಷೇತರರು 1 ಸ್ಥಾನ ಗಳಿಸಿದ್ದಾರೆ. ವಿಜಯಪುರ ಜಿಲ್ಲೆ ಅಲಮೇಲು ಪ.ಪಂ. ಫಲಿತಾಂಶ ಅತಂತ್ರವಾಗಿದೆ. ದಾವಣಗೆರೆಯ ಮಲೆಬೆನ್ನೂರು ಪುರಸಭೆಯಲ್ಲಿ ಕಾಂಗ್ರೆಸ್ ಜಯಗಳಿಸಿ ಅಧಿಕಾರ ಹಿಡಿಯುವತ್ತ ಮುನ್ನುಗ್ಗಿದೆ.