ಚಿಕ್ಕಮ್ಮನ ಮಗನ ಜತೆ ಮಹಿಳೆಯ ಲವ್ವಿಡವ್ವಿ: ಎಚ್ಚರಿಕೆ ನೀಡಿದ ಪತಿಯ ಘನ ಘೋರ ಸಾವು
ಬಾಗಲಕೋಟೆ: ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಇಳಕಲ್ ತಾಲ್ಲೂಕಿನ ಮಹಾಂತಪುರ ಗ್ರಾಮದಲ್ಲಿ ನಡೆದಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯೇ ಸಂಚು ರೂಪಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಶಾಂತಪ್ಪ ಮಾದರ (45) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಹುಲಗವ್ವ ಮತ್ತು ಆಕೆಯ ಚಿಕ್ಕಮ್ಮನ ಮಗ ಬಸವರಾಜ ಮಾದರ ನಡುವೆ ವಿವಾಹೇತರ ಸಂಬಂಧವಿತ್ತು. ಈ ವಿಚಾರ ಶಾಂತಪ್ಪ ಮಾದರನಿಗೆ ತಿಳಿದು, ಎಚ್ಚರಿಕೆ ನೀಡಿದ್ದ. ಇದೇ ವಿಚಾರಕ್ಕೆ ಆಗಾಗ ಗಲಾಟೆಯು ನಡೆದಿತ್ತು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ, ಪ್ರಿಯಕರ ಜತೆಗೂಡಿ ಕೊಲೆ ಮಾಡಿದ್ದಾಳೆ.
ಅಕ್ಟೋಬರ್ 23ರಂದು ಮಹಾಂತಪುರ ಗ್ರಾಮದ ಹೊರವಲಯದ ಶೆಡ್ ಒಂದರಲ್ಲಿ ಕೊಲೆ ನಡೆದಿತ್ತು. ರಾಡ್ನಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಪತ್ನಿ ಹುಲಗವ್ವ, ಆಕೆಯ ಪ್ರಿಯಕರ ಬಸವರಾಜ ಮಾದರ ಹಾಗೂ ಇನ್ನೊಬ್ಬ ಸೇರಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಆಲಮಟ್ಟಿ ಜಲಾಶಯದಲ್ಲಿ ಎಸೆದಿದ್ದರು. ಆರೋಪಿ ಹುಲಗವ್ವ ಆರೋಪಿ ಬಸವರಾಜ ಮಾದರ ಇನ್ನೋರ್ವ ಆರೋಪಿ
ಕೆಲ ದಿನಗಳಿಂದ ಶಾಂತಪ್ಪ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಸಹೋದರ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ಇದಾದ ಬಳಿಕ ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯ ನಿಜ ಬಣ್ಣ ಬಯಲಾಗಿದೆ. ಇಬ್ಬರು ಸೇರಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಶಾಂತಪ್ಪನ ಪತ್ನಿ ಹುಲಗವ್ವ ಮಾದರ, ಆಕೆಯ ಪ್ರಿಯಕರ ಬಸವರಾಜ ಮಾದರ ಹಾಗೂ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.