ಕ್ಯಾಪ್ಟನ್ ಮಿಲ್ಲರ್" ಚಿತ್ರದ ಪೋಸ್ಟರ್ ಹಂಚಿಕೊಂಡ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ಶಿವಣ್ಣ ಕಾಲಿವುಡ್ ಪ್ರವೇಶಿಸಿದ್ದು, ಧನುಷ್ ಅಭಿಯದ "ಕ್ಯಾಪ್ಟನ್ ಮಿಲ್ಲರ್" ಚಿತ್ರದಲ್ಲಿ ಧನುಷ್ ಅಣ್ಣನಾಗಿ ನಟಿಸಲಿದ್ದಾರೆ. ಈ ಬಗ್ಗೆ ಶಿವಣ್ಣ ಸದ್ಯ ಟ್ವಿಟರ್ನಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಅರಣ್ ಮಾಥೇಶ್ವರನ್ ನಿರ್ದೇಶನ ಮಾಡುತ್ತಿದ್ದು, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಕ್ಯಾಪ್ಟನ್ ಮಿಲ್ಲರ್ ತೆರೆಕಾಣಲಿದೆ. ಆದರೆ ಬಿಡುಗಡೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ.