ನಮ್ಮ ಬಳಿ ಹಣ ಇಲ್ಲ, ಯು ಪಿ ಐ ಮೂಲಕ ದಂಡದ ನಿಡುತ್ತೇವೆ. ಅಂದ್ರೆ ಮುಗೀತು ಕಥೆ..! ಏಕೆ ಅಂತೀರಾ.!

ನಮ್ಮ ಬಳಿ ಹಣ ಇಲ್ಲ, ಯು ಪಿ ಐ ಮೂಲಕ ದಂಡದ ನಿಡುತ್ತೇವೆ. ಅಂದ್ರೆ ಮುಗೀತು ಕಥೆ..! ಏಕೆ ಅಂತೀರಾ.!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದರೆ, ದಂಡ ಕಟ್ಟುವಾಗ ವಾಹನ ಸವಾರರು ಆದಷ್ಟೂ ಕ್ಯಾಶ್ ಬಳಸೋದು ಉತ್ತಮ. ನಮ್ಮ ಬಳಿ ಹಣ ಇಲ್ಲ,ಯು ಪಿ ಐ ಮೂಲಕ ದಂಡದ ಮೊತ್ತ ಪಾವತಿ ಮಾಡ್ತೇವೆ ಎಂದರೆ ಮುಗೀತು ಕಥೆ.

ಏಕೆ ಅಂತೀರಾ.ಕಾರಣ ಬಹಳ ಸಿಂಪಲ್.ಬೆಂಗಳೂರು ನಗರದ ಟ್ರಾಫಿಕ್‌ಗಿಂತಲೂ ಸ್ಲೋ ಮೂವಿಂಗ್ ಆಗಿದೆ ಪೊಲೀಸರು ಬಳಸುತ್ತಿರುವ ಯುಪಿಐ ವ್ಯವಸ್ಥೆ.

ಪೊಲೀಸ್ ಅಧಿಕಾರಿಗಳಿಗೆ ಇಲಾಖೆ ವತಿಯಿಂದ ನೀಡಿರುವ ಎಲೆಕ್ಟ್ರಾನಿಕ್ ಉಪಕರಣದ ಮೂಲಕ ವಾಹನ ಸವಾರರು ದಂಡದ ಮೊತ್ತ ಪಾವತಿ ಮಾಡಬೇಕು. ಈ ಉಪಕರಣವು ಟ್ರಾಫಿಕ್ ನಿರ್ವಹಣಾ ಕೇಂದ್ರದ ಸರ್ವರ್‌ ಜೊತೆ ಸಂಪರ್ಕದಲ್ಲಿ ಇರುತ್ತದೆ. ಜೊತೆಯಲ್ಲೇ ಆ ಸರ್ವರ್ ಬ್ಯಾಂಕ್ ಅಕೌಂಟ್‌ ಕೂಡ ಸಂಪರ್ಕದಲ್ಲಿ ಇರುತ್ತದೆ. ಒಂದು ಬಾರಿ ದಂಡದ ಮೊತ್ತ ಪಾವತಿ ಮಾಡಿದ ಬಳಿಕ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಆದರೆ, ಆಗಾಗ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ.

ಪೇಟಿಎಂ, ಗೂಗಲ್ ಪೇ, ಫೋನ್ ಪೇ ಯಾವುದನ್ನೇ ಬಳಸಿ ಪೊಲೀಸರು ನೀಡುವ ಯುಪಿಐ ಕೋಡ್ ಸ್ಕ್ಯಾನ್ ಮಾಡಿದರೆ ಹಣ ಪಾವತಿ ಆಗಿಬಿಡುತ್ತೆ ಎಂದು ಭಾವಿಸಬೇಡಿ. ಏಕೆಂದರೆ, ನೀವೇನೋ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಆಗಿದೆ ಎನ್ನುತ್ತೀರಿ, ನಿಮ್ಮ ಅಕೌಂಟ್‌ನಿಂದಲೂ ಹಣ ಕಟ್ ಆಗಿರುತ್ತೆ. ನಿಮಗೆ ಮೆಸೇಜ್ ಕೂಡಾ ಬಂದಿರುತ್ತೆ. ಆದರೆ, ಪೊಲೀಸರ ಖಾತೆಗೆ ಹಣ ಜಮೆ ಆಗಿರೋದಿಲ್ಲ. ಎಲ್ಲಿಯವರೆಗೂ ಪೊಲೀಸರ ಖಾತೆಗೆ ಹಣ ಜಮೆ ಆಗಿಲ್ಲವೋ, ಅಲ್ಲಿಯವರೆಗೂ ನೀವು ಮುಂದಕ್ಕೆ ಹೊರಡುವಂತಿಲ್ಲ.ಹೀಗಾಗಿ ಬಹಳ ಹೊತ್ತು ಕಾಯಬೇಕಾದ ಪರಿಸ್ಥಿತಿಯನ್ನು ಹಲವರು ಅನುಭವಿಸಿದ್ದಾರೆ