ಬಾಲಿವುಡ್ ನಲ್ಲಿ ಶಿಖರ್ ಧವನ್ ಚಿತ್ರ: ಸಿನಿಮಾ ಫಸ್ಟ್ ಲುಕ್ ಬಿಡುಗಡೆ

ಬಾಲಿವುಡ್ ನಲ್ಲಿ ಶಿಖರ್ ಧವನ್ ಚಿತ್ರ: ಸಿನಿಮಾ ಫಸ್ಟ್ ಲುಕ್ ಬಿಡುಗಡೆ

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಬಾಲಿವುಡ್ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 'ಡಬಲ್ ಎಕ್ಸ್‌ಎಲ್' ಎಂಬ ಚಿತ್ರದಲ್ಲಿ ನಟಿ ಹುಮಾ ಖುರೇಷಿ ಮತ್ತು ಸೋನಾಕ್ಷಿ ಸಿನ್ಹಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ನಟಿ ಹುಮಾ ಖುರೇಷಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಧವನ್ ಸದಾ ಸುದ್ದಿಯಲ್ಲಿರುತ್ತಾರೆ. ಇನ್ಸ್ಟಾಗ್ರಾಮ್ ರಿಲ್ಸ್ ಮಾಡುವುದರಲ್ಲಿ ನಿಪುಣರು.

'ಡಬಲ್ ಎಕ್ಸ್‌ಎಲ್' ಸಿನಿಮಾ ಇಬ್ಬರು ದಪ್ಪ ಸೈಜ್ ಮಹಿಳೆಯರ ಕಥೆ. ಆಕೆ ತನ್ನ ಕನಸನ್ನು ಹೇಗೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ, ಅದನ್ನೇ ಈ ಚಿತ್ರದಲ್ಲಿ ತೋರಿಸಲಾಗಿದೆ. 'ಡಬಲ್ ಎಕ್ಸ್‌ಎಲ್' ಚಿತ್ರವನ್ನು ಸತ್ರಂ ರಮಣಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಅಧಿಕ/ಹೆಚ್ಚು ತೂಕ ಹೊಂದಿರುವ ಮಹಿಳೆಯರ ಬಗ್ಗೆ ಹೇಳಲು ಹೊರಟಿದೆ. ಇದರಲ್ಲಿ ಶಿಖರ್ ಧವನ್ ನಾಯಕ ನಟನಾಗಿ ಕಾಣಿಸುತ್ತಿಲ್ಲ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಅಕ್ಟೋಬರ್ 14ಕ್ಕೆ ಚಿತ್ರ ತೆರೆಗೆ ಬರಲಿದೆ

ದೇಶ ಮತ್ತು ಯುಕೆಯಲ್ಲಿ ಈ ಸಿನಿಮಾ ವ್ಯಾಪಕವಾಗಿ ಚಿತ್ರೀಕರಿಸಲಾದ 'ಡಬಲ್ ಎಕ್ಸ್‌ಎಲ್' ಇಬ್ಬರು ಹೆಚ್ಚು ದೇಹ ತೂಕ ಹೊಂದಿರುವ ಮಹಿಳೆಯರ ಕಥೆಯನ್ನು ಹೇಳಲು ಹೊರಟಿದ್ದಾರೆ. 'ಡಬಲ್ ಎಕ್ಸ್‌ಎಲ್' ಅಕ್ಟೋಬರ್ 14, 2022 ರಂದು ಥಿಯೇಟರ್ಗಳಿಗೆ ಎಂಟ್ರಿ ನೀಡಲಿದೆ.

ಈ ಸಿನಿಮಾಗಾಗಿ 15-20 ಕೆಜಿ ತೂಕ ಹೆಚ್ಚಿಸಿಕೊಂಡ ನಟಿಯರು

'ಡಬಲ್ ಎಕ್ಸ್‌ಎಲ್' ಅನ್ನು ಗುಲ್ಶನ್ ಕುಮಾರ್, ಟಿ-ಸೀರೀಸ್, ವಕಾವೊ ಫಿಲ್ಮ್ಸ್ ಮತ್ತು ಮುದಸ್ಸರ್ ಅಜೀಜ್ ಅವರು ಟಿ-ಸೀರೀಸ್ ಫಿಲ್ಮ್ಸ್ ಸಹಯೋಗದಲ್ಲಿ ಪ್ರಸ್ತುತಪಡಿಸಿದ್ದಾರೆ. ಇದು ವಕಾವೊ ಫಿಲ್ಮ್ಸ್, ಅಲೆಮೆನ್3 ಎಂಟರ್ಟೈನ್ಮೆಂಟ್ ಮತ್ತು ರಿಕ್ಲೈನಿಂಗ್ ಸೀಟ್ಸ್ ಸಿನಿಮಾ ಪ್ರೊಡಕ್ಷನ್ಸ್ನ ಒಡೆತನದಲ್ಲಿದೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ಪ್ರಚಂಡ ದೇಹದ ರೂಪಾಂತರವನ್ನು ಮಾಡಿದ್ದಾರೆ. ನಟಿಯರು 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿರುವ ಧವನ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಕ್ಯಾಪ್ಟನ್ ಆಗಿ ಆಡುತ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ರಂತಹ ಸ್ಟಾರ್ ಗಳಿಂದ ಕಂಗೊಳಿಸುತ್ತಿರುವ ತಂಡ ಆಸ್ಟ್ರೇಲಿಯಾದಲ್ಲಿದೆ. ಅಲ್ಲಿ ಟಿ20 ವಿಶ್ವಕಪ್ಗೆ ತಯಾರಿ ನಡೆಸುತ್ತಿದ್ದಾರೆ. ಧವನ್ ತಂಡದಲ್ಲಿ ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ರಂತಹ ಯುವ ಆಟಗಾರರಿದ್ದಾರೆ.

ದಾಖಲೆ ಬರೆದ ಧವನ್

ಧವನ್ ಟೀಂ ಇಂಡಿಯಾಗೆ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 40.61 ಆಗಿದೆ. ಧವನ್ ಟೆಸ್ಟ್ನಲ್ಲಿ ಏಳು ಶತಕ ಮತ್ತು ಐದು ಅರ್ಧ ಶತಕಗಳನ್ನು ಹೊಂದಿದ್ದಾರೆ. ಅವರು ಏಕದಿನದಲ್ಲಿ 161 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 45.33ರ ಸರಾಸರಿಯಲ್ಲಿ 6664 ರನ್ಗಳು ದಾಖಲಾಗಿವೆ. ಅವರ ಹೆಸರಿನಲ್ಲಿ 17 ಶತಕ ಮತ್ತು 38 ಅರ್ಧ ಶತಕಗಳಿವೆ. 68 ಟಿ20ಗಳಲ್ಲಿ ಶಿಖರ್ 27.92ರ ಸರಾಸರಿಯಲ್ಲಿ ಮತ್ತು 126.33 ಸ್ಟ್ರೈಕ್ ರೇಟ್ನಲ್ಲಿ 1759 ರನ್ ಗಳಿಸಿದ್ದಾರೆ.