ಡಬ್ಬಾ ಅಂಗಡಿಗಳಿಗೆ ಆಗ್ರಹಿಸಿ, ಅಂಗಡಿಕಾರರಿಂದ ಪ್ರತಿಭಟನೆ.

ಧಾರವಾಡ

ಡಬ್ಬಾ ಅಂಗಡಿಕಾರ ಪುನರ್ ವಸತಿಗಾಗಿ ಮೀಸಲಿಟ್ಟ ಜಾಗೆಯನ್ನು ಅಂಗಡಿಕಾರಿಗೆ ಪೂರೈಸುಬೇಕೆಂದು ಆಗ್ರಹಿಸಿ, ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ದಿ ಸಂಘದವರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಅಂಬೇಡ್ಕರ್ ಸಂಘಟನೆ ಕಾರ್ಯಕರ್ತರು ಪಾಲಿಕೆ ಅಧಿಕಾರಿಗಳ ಮೇಲೆ ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದ್ರು. ಅಲ್ಲದೆ ಇನ್ನಾದರೂ ಧಾರವಾಡ ಕಿಟಲ್ ಕಾಲೇಜ ಹತ್ತಿರ ಇರುವಂತಾ ಸರ್ಕಾರಿ ಜಮೀನಿನಲ್ಲಿ ತೆರವುಗೊಳಿಸಿದ ಡಬ್ಬಾ ಅಂಗಡಿಗಳ, ಮತ್ತೆ ಪುನರ್ ವಸತಿಗಾಗಿ ಮೀಸಲಿಟ್ಟ ಜಾಗವನ್ನು ಅಂಗಾಡಿಕಾರರ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದರು.