ಸ್ಯಾಂಟ್ರೋ ರವಿ ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಸ್ಯಾಂಟ್ರೋ ರವಿ ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು : ಸ್ಯಾಂಟ್ರೋ ರವಿ ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಇನ್ನೂ ಬಂಧಿಸಲಾಗಿಲ್ಲ, ಪತ್ನಿಯ ದೂರಿನ ಹೊರತಾಗಿ ಬೇರೆ ದೂರು ದಾಖಲಾಗಿಲ್ಲ, ತನಿಖೆಗೆ ಮುಂದಾಗಿಲ್ಲ.

ತಮ್ಮ ಮಗನ ಸ್ವೀಟ್ ಬ್ರದರ್‌ನನ್ನು ರಕ್ಷಿಸುತ್ತಿರುವುದು ಯಾರು ಸಿಎಂ ಬೊಮ್ಮಾಯಿ ಅವರೇ? ಆತನನ್ನು ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ?