ಕರ್ತವ್ಯ ನಿರತ ಪೊಲೀಸರು ಮೃತಪಟ್ಟರೆ ಸಿಗಲಿದೆ 20 ಲಕ್ಷ ರೂ. ವಿಮೆ ಪರಿಹಾರ: ರಾಜ್ಯ ಸರ್ಕಾರದಿಂದ ಆದೇಶ

ಕರ್ತವ್ಯ ನಿರತ ಪೊಲೀಸರು ಮೃತಪಟ್ಟರೆ ಸಿಗಲಿದೆ 20 ಲಕ್ಷ ರೂ. ವಿಮೆ ಪರಿಹಾರ: ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ರಾಜ್ಯದ ಪೊಲೀಸರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ 20 ಲಕ್ಷ ರೂ. ವಿಮೆಯನ್ನು ವಿಮಾ ಕಂಪನಿಯಿಂದ ಪಡೆಯಲು ಸರ್ಕಾರ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.

ರಾಜ್ಯ ಸರ್ಕಾರವು ಅ.6 ರಂದು ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ರಾಜ್ಯ ಪೊಲೀಸರು ಕರ್ತವ್ಯದಲ್ಲಿದ್ದಾಗ ಮೃತಪಟ್ಟಲ್ಲಿ 20 ಲಕ್ಷ ರೂ.ಗಳ ಗುಂಪು ವಿಮೆಯನ್ನು ವಿಮಾ ಕಂಪನಿಯಿಂದ ಪಡೆಯಲು ಸೂಚನೆ ನೀಡಿದೆ.

ಪೊಲೀಸ್ ಇಲಾಖೆಯಲ್ಲಿ ಅನುಯಾಯಿ, ಪೊಲೀಸ್ ಸಿಬ್ಬಂದಿ, ಎಚ್ ಸಿ, ಎಎಸ್ ಐ, ಪಿಎಸ್ ಐ, ಸಿಪಿಐ ಹುದ್ದೆಯವರೆಗೆ ಒಟ್ಟು 90,013 ಅಧಿಕಾರಿ, ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ದಿನದ 24 ಗಂಟೆಗಳಲ್ಲಿ ಆಕಸ್ಮಿಕ ಅಥವಾ ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 20 ಲಕ್ಷ ರೂ. ವಿಮೆ ಪಡೆಯಬಹುದಾಗಿದೆ. ಕಳೆದ ಅಕ್ಟೋಬರ್‌ 10ರಿಂದ 2023ರ ಅಕ್ಟೋಬರ್‌ 10ರ ವರವರೆಗೆ ಈ ಒಪ್ಪಂದ ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿಯೊಂದಿಗೆ ಇರುತ್ತದೆ.