ಕುಡಿದ ಅಮಲಿನಲ್ಲಿ ತೂರಾಡುತ್ತಲೇ ಶಾಲೆಗೆ ಬಂದ ಶಿಕ್ಷಕ!

ಕುಡಿದ ಅಮಲಿನಲ್ಲಿ ತೂರಾಡುತ್ತಲೇ ಶಾಲೆಗೆ ಬಂದ ಶಿಕ್ಷಕ!

ಕುಣಿಗಲ್​: ಇಲ್ಲೊಬ್ಬ ಶಿಕ್ಷಕ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುಡಿದ ಅಮಲಿನಲ್ಲೇ ಮಕ್ಕಳಿಗೆ ಪಾಠ ಮಾಡಲು ಬಂದಿದ್ದ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಕೊತ್ತಗೆರೆ ಹೋಬಳಿ ಸೂಳೆಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಡಿ.ಎನ್​.ಹನುಮಂತರಾಯಪ್ಪ ಅವರನ್ನ ಅಮಾನತು ಮಾಡಲಾಗಿದೆ.

ನ.12ರಂದು ಶಾಲೆಗೆ ಮದ್ಯ ಸೇವಿಸಿ ಹನುಮಂತರಾಯಪ್ಪ ಹಾಜರಾಗಿದ್ದರು. ಶಿಕ್ಷಕ ತೊದಲಿಸಿಕೊಂಡು ಮಾತನಾಡುವುದು, ತೂರಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಶಾಲೆಗೆ ಕುಡಿದುಕೊಂಡು ಬಂದದ್ದು, ಅಲ್ಲದೇ ಶಾಲೆಯಲ್ಲಿ ಶಿಕ್ಷಕನ ಗೈರು, ಕರ್ತವ್ಯ ಲೋಪ ಸೇರಿ ಇನ್ನಿತರ ಕಾರಣಗಳಿಂದ ಸೇವೆಯಿಂದ ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಆದೇಶ ಹೊರಡಿಸಿದ್ದಾರೆ.