ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ಗಮನ ಸೆಳೆದ ಸಿದ್ಧರಾಮಯ್ಯ: ಯಾಕೆ ಗೊತ್ತಾ? ಈ ಸುದ್ದಿ ಓದಿ

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಅಯವ್ಯಯ ಮಂಡಿಸಿದರು. ಇಂದಿನ ಅವರ ಬಜೆಟ್ ಭಾಷಣಕ್ಕೂ ಮುನ್ನಾ ಸದನದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಂಡಿದ್ದು ಮಾತ್ರ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು.
ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡನೆಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಕಿವಿಯಲ್ಲಿ ಚೆಂಡು ಹೂ ಮುಡಿದುಕೊಂಡು ಬಂದು ಗಮನ ಸೆಳೆದರು. ಈ ಮೂಲಕ ಆಡಳಿತಾರೂಢ ಬಿಜೆಪಿ ಇಂದು ಮಂಡಿಸುತ್ತಿರುವಂತ ಬಜೆಟ್ ಕೇವಲ ಜನರ ಕಿವಿಗೆ ಹೂ ಮುಡಿಸುತ್ತಿರುವಂತೆ ವ್ಯಂಗ್ಯ ಮಾಡಿದರು.
ಸಿದ್ಧರಾಮಯ್ಯ ಕಿವಿಯ ಮೇಲೆ ಹೂ ಮುಡಿದಿದ್ದನ್ನು ಕೆಲ ಬಿಜೆಪಿ ನಾಯಕರು ಸದನದಲ್ಲಿ ಆಕ್ಷೇಪಿಸಿದರು. ಆದ ಸ್ಪೀಕರ್ ಕಾಗೇರಿಯವರೇ ಬಿಜೆಪಿ ಅಂದ್ರೇ ಕೆಂಪು, ಅವರು ಕೆಂಪು ಹೂ ಮುಡಿದು ಬಂದಿದ್ದಾರೆ. ನಿಮ್ಮನ್ನು ಬೆಂಬಲಿಸುತ್ತಿರೋದಾಗಿ ಛೇಡಿಸಿದರು.
ಈ ವೇಳೆ ಮಾತಿಗೆ ನಿಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರವು ಹಿಂದಿನ ಬಜೆಟ್ ಮತ್ತು ಅದರ 2018 ರ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸದೆ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಬಜೆಟ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂಬರುವ ಹಣಕಾಸು ವರ್ಷದಿಂದ ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದರು.