ಭತ್ತದ ತಳಿಗೆ ಮಾಜಿ ಪ್ರಧಾನಿ ದೇವೇಗೌಡರ ಹೆಸರಿಟ್ಟ ಪಂಜಾಬ್ ರೈತರು

ಭತ್ತದ ತಳಿಗೆ ಮಾಜಿ ಪ್ರಧಾನಿ ದೇವೇಗೌಡರ ಹೆಸರಿಟ್ಟ ಪಂಜಾಬ್ ರೈತರು

ನವದೆಹಲಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ( Ex PM HD Deve Gowdha ) ಮಣ್ಣಿನ ಮಗ ಎಂದೇ ಕರೆಯಲಾಗುತ್ತಿದೆ. ರೈತರು, ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಹೊಂದಿರುವಂತ ಅವರು, ಅನೇಕ ಸಂದರ್ಭಗಳಲ್ಲಿ ರೈತರ ಪರವಾಗಿ ಪ್ರತಿಭಟನೆಗೂ ಇಳಿದಿದ್ದಾರೆ.

ಈ ಎಲ್ಲದರ ಪರಿಣಾಮವೇ ಪಂಜಾಬ್ ರೈತರು, ಭತ್ತದ ತಳಿಯೊಂದಕ್ಕೆ 'ದೇವ್ ಗೌಡ'(Dev Gowdha) ಎಂಬುದಾಗಿ ಹೆಸರಿಟ್ಟಿದ್ದಾರೆ.

ಹೌದು.. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡು ರೈತರ ಪರವಾಗಿ ನಿಲುವು, ಅವರನ್ನು ಬೆಂಬಲಿಸಿ ಪ್ರತಿಭಟನೆಗೆ ಇಳಿದಿದ್ದರ ಗೌರವಾರ್ಥವಾಗಿ ಪಂಜಾಬ್ ರೈತರು ಅವರ ಹೆಸರನ್ನೇ, ಭತ್ತದ ತಳಿಯೊಂದಕ್ಕೆ ಇಟ್ಟಿದ್ದಾರೆ.

ಅಂದಹಾಗೇ 1991ರಲ್ಲಿ ಅಂದು ಪ್ರಧಾನಿಯಾಗಿದ್ದಂತ ಮನಮೋಹನ್ ಸಿಂಗ್ ಅವರು ರೈತರಿಗೆ ನೀಡಲಾಗುತ್ತಿದ್ದಂತ ಸಬ್ಸಿಡಿ ಕೊನೆಗೊಳಿಸೋ ನಿರ್ಧಾರವನ್ನು ಬಜೆಟ್ ನಲ್ಲಿ ಘೋಷಿಸಿದಾಗ, ಬಜೆಟ್ ಮೇಲಿನ ಚರ್ಚೆಯ ವೇಳೆ ಇದನ್ನು ದೇವೇಗೌಡರು ತೀವ್ರವಾಗಿ ವಿರೋಧಿಸಿದ್ದರು. ಜೊತೆಗೆ ಈ ನಿರ್ಧಾರವನ್ನು ವಾಪಾಸ್ ಪಡೆಯುವಂತೆ ಸಂಸತ್ ನಲ್ಲಿ ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರು.

ಇದಲ್ಲದೇ ಅನೇಕ ಸಂದರ್ಭದಲ್ಲಿ ರೈತರ ಬಗ್ಗೆ ನಾನು ಮಣ್ಣಿನ ಮಗ, ರೈತ ಕುಟುಂಬದಿಂದ ಬಂದವನು. ಇದನ್ನೆಲ್ಲಾ ಪ್ರಚಾರಕ್ಕಾಗಿ ಮಾಡೋದಿಲ್ಲ. ರೈತರಿಗೆ ಯಾವುದೇ ಸಮಸ್ಯೆ ಉಂಟಾಗದ ನಾ ಪ್ರತಿಭಟಿಸೋದಾಗಿ ತಿಳಿಸಿದ್ದರು.