ಆಸ್ತಿ ಮುಟ್ಟುಗೋಲು ಹಾಕಲು ಕೋರ್ಟ್ ನೋಟಿಸ್; ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ
ನವದೆಹಲಿ: ದೆಹಲಿಯ ಗೋಕಲ್ಪುರಿ ಗ್ರಾಮದಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ದೆಹಲಿ ಪೊಲೀಸರ ಪ್ರಕಾರ, ವಂಶಿಕಾ ಕಲೆಕ್ಷನ್ಸ್ ಮಾಲೀಕ ಕಪಿಲ್ ಕುಮಾರ್ (33) ಅವರು ನ್ಯಾಯಾಲಯದಿಂದ ಆಸ್ತಿ ಜಪ್ತಿ ನೋಟಿಸ್ ಪಡೆದ ನಂತರ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.
ಕೆಲವು ಅಧಿಕಾರಿಗಳು ದೆಹಲಿಯ ಗೋಕಲ್ ಪುರಿ ಪೊಲೀಸ್ ಠಾಣೆಗೆ ಆಗಮಿಸಿ, ಗೋಕಲ್ ಪುರಿ ಗ್ರಾಮದಲ್ಲಿರುವ ಒಂದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪೊಲೀಸರ ಸಹಾಯವನ್ನು ಕೋರಿ ನ್ಯಾಯಾಲಯದ ಆದೇಶವನ್ನು ಹಾಜರುಪಡಿಸಿದರು. ಈ ಮೇರೆಗೆ ಪೊಲೀಸ್ ಠಾಣೆಯ ಸಿಬ್ಬಂದಿ ಆಸ್ತಿ ಜಪ್ತಿ ಮಾಡಲು ಹೋದರು.
ಈ ಮಾಹಿತಿ ಪಡೆದ ಕಪಿಲ್ ತನ್ನ ಜಮೀನಿನ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದನು. ಜನರು ಅವನನ್ನು ರಕ್ಷಿಸಲು ಮತ್ತು ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಗೋಕಲ್ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.