ಬೆಂಗಳೂರಿನ ಜನರೇ ಗಮನಿಸಿ: ಇಂದು ಈ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು: ಇಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಟಿ.ಕೆ ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಯಂತ್ರಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 9 ಗಂಟೆಯಿಂದ, ಸಂಜೆ 4 ಗಂಟೆಯವರೆಗೆ ಕೆಲ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಬಗ್ಗೆ ಬಿಡಬ್ಲ್ಯೂಎಸ್‌ಎಸ್ ಬಿಯಿಂದ ಮಾಹಿತಿ ನೀಡಲಾಗಿದ್ದು, ಇಂದು ವಿವಿಧೆಡೆಯಲ್ಲಿ ನೀರು ಪೂರೈಕೆ ಯಂತ್ರಗಳ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಪಿ ಅಗ್ರಹಾರ, ಚಾಮರಾಜಪೇಟೆ, ವಾಲ್ಮೀಕಿ ನಗರ, ವಿಎಸ್ ಗಾರ್ಡನ್, ಪಾದರಾಯನಪುರ ಪ್ಲವರ್ ಗಾರ್ಡನ್, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್ ಗಳಲ್ಲಿ ನೀರು ಪೂರೈಕೆಯಾಗೋದಿಲ್ಲ.
ಇದಲ್ಲದೇ ಐಟಿಐ ಲೇಔಟ್, ಬಸವನಗುಡಿ, ಅಶೋಕ ನಗರ, ಬನಶಂಕರಿ 1ನೇ ಹಂತ, ಶಾಂತಿನಗರ, ಆಜಾದ್ ನಗರ, ಮಾರುತಿ ನಗರ, ಹೊಸಕೆರೆಹಳ್ಳಿ, ಟೀಚರ್ಸ್ ಕಾಲೋನಿ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಯಡಿಯೂರು, ದೊಮ್ಮಲೂರು, ಬ್ರಿಗೇಡ್ ರಸ್ತೆ, ಕತ್ರಿಗುಪ್ಪೆ, ತ್ಯಾಗರಾಜನಗರ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಆಡುಗೋಡಿ, ಕೋರಮಂಗಲ 6 ಮತ್ತು 7, 8ನೇ ಬ್ಲಾಕ್, ಕಲಾಸಿಪಾಳ್ಯ, ಪದ್ಮನಾಭನಗರ, ಚಿಕ್ಕಲ್ಲಸಂದ್ರ, ಚಿಕ್ಕಪೇಟೆ, ಜಯನಗರ 3ನೇ ಬ್ಲಾಕ್ ಮತ್ತು ಉತ್ತರಹಳ್ಳಿ ಸೇರಿದಂತೆ ವಿವಿಧೆಡೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.